ಅಮೆರಿಕಾ ದಾಳಿ ಬಗ್ಗೆ ತನಿಖೆ ನಡೆಸಲಿದೆಯಂತೆ ತಾಲಿಬಾನ್; ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಅಮೆರಿಕಾ ದಾಳಿ ಬಗ್ಗೆ ತನಿಖೆ ನಡೆಸಲಿದೆಯಂತೆ ತಾಲಿಬಾನ್; ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

01. ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ
ಇಂದು ಸಂಜೆ 4 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸದ್ಯ ಗಣೇಶ​ ಹಬ್ಬ ಸಮೀಪದಲ್ಲಿದ್ದು, ಸಾಮೂಹಿಕವಾಗಿ ಆಚರಣೆ ಮಾಡ್ಬೇಕಾ.. ಬೇಡ್ವಾ ಅನ್ನೋ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆ ಇಂದು ನಡೆಯಲಿರೋ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಸಿಎಂ​ ಬೊಮ್ಮಾಯಿ ಹಬ್ಬದ ಆಚರಣೆ ವಿಚಾರವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ.

02. ಪ್ರಾಥಮಿಕ ಹಂತದ ಶಾಲೆ ಆರಂಭದ ಬಗ್ಗೆ ಚರ್ಚೆ
ಇನ್ನು ಇದೇ ವೇಳೆ ಪ್ರಾಥಮಿಕ ಹಂತದ ಶಾಲೆ ಆರಂಭದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಶಿಕ್ಷಣ ಸಚಿವರು ಹಾಗೂ ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಲಿದ್ದಾರೆ. ಯಾವ್ಯಾವ ತರಗತಿಗಳನ್ನು ಪ್ರಾರಂಭಿಸಬಹುದು? ಯಾವಾಗಿನಿಂದ ತರಗತಿಗಳನ್ನು ಆರಂಭಿಸಬಹುದು? ಹಾಗೆ ತರಗತಿಗಳ ಆರಂಭಕ್ಕೂ ಮುನ್ನ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ಚರ್ಚಿಸಿ, ನಿರ್ಧಾರ ಪ್ರಕಟಿಸೋ ಸಾಧ್ಯತೆ ಇದೆ.

03. ಲಾಕ್​ಡೌನ್​ಗೆ ಆಗುತ್ತಾ ಕೇರಳ?
ಕಳೆದ ಒಂದು ವಾರದಿಂದ ಕೇರಳದಲ್ಲಿ ಸುಮಾರು 30 ಸಾವಿರ ಕೊರೊನಾ ಕೇಸ್​ಗಳು ವರದಿಯಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 15ರೊಳಗೆ ನಿಯಂತ್ರಣಕ್ಕೆ ಬಾರದಿದ್ದರೆ ಕೇರಳದಲ್ಲಿ ಲಾಕ್ ಡೌನ್ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಿನ್ನೆ ಕೇರಳದಲ್ಲಿ 29 ಸಾವಿರದ 836 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, 75 ಸೋಂಕಿತರು ಸಾವಾನ್ನಪ್ಪಿದ್ದಾರೆ. ಇನ್ನು ಒಟ್ಟು ಸೋಂಕಿತರ ಸಂಖ್ಯೆ 40 ಲಕ್ಷದ 7 ಸಾವಿರದ 408ಕ್ಕೆ ಏರಿಕೆಯಾಗಿದೆ.

04. ಅಮೆರಿಕಾ ದಾಳಿ ಬಗ್ಗೆ ತಾಲಿಬಾನ್​ನಿಂದ ತನಿಖೆ
ಐಸಿಸ್​-ಕೆ ಉಗ್ರರ ಮೇಲೆ ಅಮೆರಿಕಾ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ತನಿಖೆ ಮಾಡೋದಾಗಿ ತಾಲಿಬಾನ್​​ ಘೋಷಿಸಿದೆ. ಕಾಬೂಲ್​ನಲ್ಲಿ ನಡೆಸಿದ ದಾಳಿಯಲ್ಲಿ ಅನೇಕ ಅಫ್ಘಾನ್​ ಜನರು ಸಾವನಪ್ಪಿದ್ದಾರೆ. ಈ ಬಗ್ಗೆ ನಾವು ತನಿಖೆ ಮಾಡಲಿದ್ದೇವೆ ಅಂತಾ ತಾಲಿಬಾನ್​​ ವಕ್ತಾರ ಜಬಿವುಲ್ಲಾ ಮುಜಾಯಿದ್ ಹೇಳಿದ್ದಾನೆ. ಅಲ್ಲದೇ ಆಗಸ್ಟ್ 31ರ ಬಳಿಕ ಅಮೆರಿಕಾಕ್ಕೆ ಅಫ್ಘಾನಿಸ್ತಾನದಲ್ಲಿ ಯಾವುದೇ ದಾಳಿ ನಡೆಸುವ ಹಕ್ಕಿಲ್ಲ ಅಂತಾ ಮೊಂಡ ಎಚ್ಚರಿಕೆಯನ್ನೂ ತಾಲಿಬಾನ್ ನೀಡಿದೆ.

05. ಶೀಘ್ರ ತಾಲಿಬಾನ್​ ಸರ್ವೋಚ್ಚ ನಾಯಕ ಪ್ರತ್ಯಕ್ಷ!
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚಿಸೋ ಪ್ಲಾನ್​ನಲ್ಲಿದ್ದಾರೆ. ಇಷ್ಟಾದ್ರೂ ತಾಲಿಬಾನಿಗಳ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂದ್​ಜಾದ ಮಾತ್ರ ಈವರೆಗೂ ಕಾಣಿಸಿಕೊಂಡಿಲ್ಲ. ಆತ ಎಲ್ಲಿದ್ದಾನೆ, ಏನೆಲ್ಲಾ ಕಾರ್ಯತಂತ್ರ ರೂಪಿಸುತ್ತಿದ್ದಾನೆ ಎಂಬುದರ ಯಾವುದೇ ಸುಳಿವಿಲ್ಲ. ಈ ಬಗ್ಗೆ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದು, ನಮ್ಮ ನಾಯಕ ಕಂದಹಾರ್‌ನಲ್ಲಿ ಇದ್ದಾರೆ. ಅತೀ ಶೀಘ್ರದಲ್ಲಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಆಗಸ್ಟ್​ 31ರ ಬಳಿಕ ಹೈಬತುಲ್ಲಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ.

06. ‘ಅಶ್ರಫ್ ಘನಿ ಹಣ ವಾಪಸ್​ ಕೊಡ್ಬೇಕು’
ಅಫ್ಘಾನ್​​ನಿಂದ ಕಾಲ್ಕಿತ್ತಿದ್ದ ಅಧ್ಯಕ್ಷ ಅಶ್ರಪ್ ಘನಿ ವಿರುದ್ಧ ತಾಲಿಬಾನಿಗಳು ಕಿಡಿಕಾರಿದ್ದಾರೆ. ಈ ಬಗ್ಗೆ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದು, ಅಶ್ರಫ್ ಘನಿ ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದು, ಹಣ ಸಮೇತ ಪರಾರಿಯಾಗಿದ್ದಾರೆ, ನಾವು ಶಾಂತಿಯುತವಾದ ಅಧಿಕಾರ ವರ್ಗಾವಣೆಗಾಗಿ ಕಾಯುತ್ತಿದ್ವಿ. ಆದ್ರೆ ಅಶ್ರಫ್​ ಘನಿ ದೇಶದಿಂದ ಪಲಾಯನ ಮಾಡಿ ತಪ್ಪುಮಾಡಿದ್ದಾರೆ. ತಮ್ಮೊಂದಿಗೆ ಕೊಂಡೊಯ್ದ ಅಫ್ಘಾನ್​ ಸಂಪತ್ತನ್ನು ಘನಿ ಹಿಂದಿರುಗಿಸಬೇಕು ಅಂತ ಸುಹೈಲ್ ಶಹೀನ್ ಎಚ್ಚರಿಸಿದ್ದಾರೆ.

07. ಬಾಹ್ಯಾಕಾಶದಲ್ಲಿ ಫ್ರೆಂಡ್ಸ್​ ಜೊತೆ ಪಿಜ್ಜಾ ಪಾರ್ಟಿ!
ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಫ್ಲೋಟಿಂಗ್ ಪಿಜ್ಜಾ ತಿನ್ನುತ್ತಿರುವ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಸದ್ಯ ಈ ವಿಡಿಯೋ ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ವಿಡಿಯೋ ನೋಡಿದವರನ್ನ ಹುಬ್ಬೇರುವಂತೆ ಮಾಡಿದೆ. ಇನ್ನು ಈ ವಿಡಿಯೋವನ್ನು ಥಾಮಸ್ ಎಂಬ ಗಗನಯಾತ್ರಿ ಶೇರ್ ಮಾಡಿದ್ದು, ಸ್ನೇಹಿತರೊಂದಿಗೆ ಪಿಜ್ಜಾ ತಿನ್ನುತ್ತಿರುವ ಈ ಸಮಯ ತುಂಬಾ ಸುಂದರವಾಗಿದೆ ಅಂತ ಹೇಳಿದ್ದಾರೆ.

08. ‘ನಾನು ಅವಳಲ್ಲ.. ಅವನು’
ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ, ವರ್ಷದ ಕಳರಿ ಪಯಟ್ಟು ಕಲಾವಿದನಿಗೆ ಕ್ಷಮೆಯಾಚಿಸಿದ್ದಾರೆ. ಬಾಲಕನೊಬ್ಬ ಅದ್ಭುತವಾಗಿ ಕಳರಿ ಪಯಟ್ಟು ಕಲೆ ಪ್ರದರ್ಶನ ಮಾಡ್ತಿರುವ ದೃಶ್ಯವನ್ನು ಆನಂದ್ ಮಹೀಂದ್ರ ತಮ್ಮ ಟ್ವಿಟರ್​ನಲ್ಲಿ ಅಕೌಂಟ್​ನಲ್ಲಿ ಶೇರ್ ಮಾಡಿದ್ರು. ಈ ವೇಳೆ ಹುಡುಗಿಯಿಂದ ದೂರವಿರಿ ಅಂತಾನೂ ಬರೆದುಕೊಂಡಿದ್ರು. ಆದ್ರೆ, ಆ ವಿಡಿಯೋದಲ್ಲಿರುವುದು ಹುಡುಗಿಯಲ್ಲ ಹುಡುಗ ಅಂತ ಖುದ್ದು ಆ ಹುಡುಗನೇ ಕಾಮೆಂಟ್ ಮಾಡಿದ್ದಾನೆ, ಬಳಿಕ ಎಚ್ಚೆತ್ತ, ಆನಂದ್ ತಮ್ಮ ತಪ್ಪಿನ ಅರಿವಾಗಿ ಹುಡುಗನ ಬಳಿ ಕ್ಷಮೆ ಕೇಳಿದ್ದಾರೆ.

09. ಪಿವಿ ಸಿಂಧುಗೆ ‘ಮೆಗಾ’ ಔತಣ
ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದಿರುವ ಪಿವಿ ಸಿಂಧು ಅವರಿಗೆ ಟಾಲಿವುಡ್​ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ವಿಶೇಷ ಔತಣ ಕೂಟ ಆಯೋಜಿಸಿತ್ತು. ಈ ವಿಶೇಷ ಪಾರ್ಟಿಯಲ್ಲಿ ಮೆಗಾ ಕುಟುಂಬದ ಸದಸ್ಯರು, ಚಿತ್ರರಂಗದ ಕೆಲ ಪ್ರಮುಖರು ಪಾಲ್ಗೊಂಡಿದ್ದರು. ಅಲ್ಲದೆ ರಾಜಕಾರಣಿ ಟಿ. ಸುಬ್ಬಿರಾಮಿ ರೆಡ್ಡಿ, ತೆಲಂಗಾಣ ಐಟಿ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಕೂಡ ಭಾಗಿಯಾಗಿದ್ದರು. ಕಲಾವಿದರಾದ ರಾಧಿಕಾ, ಸುಹಾಸಿನಿ, ನಾಗಾರ್ಜುನ, ರಾಣಾ ದಗ್ಗುಬಾಟಿ, ಮತ್ತು ಇತರರು ಈ ಪಾರ್ಟಿಗೆ ಹಾಜರಾಗಿ ಸಿಂಧುಗೆ ಅಭಿನಂದಿಸಿದರು.

10. ಆರ್ ಅಶ್ವಿನ್ ಇನ್.. ಇಶಾಂತ್ ಔಟ್..?
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್​​ನಲ್ಲಿ ಸೋತ ಭಾರತ ತಂಡಕ್ಕೆ 4ನೇ ಟೆಸ್ಟ್ ಮ್ಯಾಚ್​​ಗೆ ಆಂಗ್ಲರ ಪಡೆಯನ್ನ ಮಣಿಸಬೇಕಿದೆ. ಹೀಗಾಗಿ ಮೂರನೇ ಟೆಸ್ಟ್ ಮ್ಯಾಚ್​ನಲ್ಲಿ ನೀರಸ ಪ್ರದರ್ಶನ ಕೊಟ್ಟಿರುವ ಇಶಾಂತ್ ಶರ್ಮಾನನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ. ಮ್ಯಾಚ್ ಮುಗಿದ ಬಳಿಕ ಇಶಾಂತ್ ಕಳಪೆ ಪ್ರದರ್ಶನ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆ ಸೆಪ್ಟೆಂಬರ್ 4ನೇ ಟೆಸ್ಟ್ ಮ್ಯಾಚ್​​ಗೆ ಇಶಾಂತ್​ ಬದಲು ಆಫ್ ಸ್ಪಿನ್ನರ್ ಆರ್. ಅಶ್ವಿನ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

Source: newsfirstlive.com Source link