ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

ಮಂಗಳೂರು: ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರ ಅರ್ಧ ಗಂಟೆ ಸಮುದ್ರದಲ್ಲಿ ಈಜಿ ಬದುಕುಳಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಅಳಿವೆಬಾಗಿಲು ಆಳಸಮುದ್ರದಲ್ಲಿ ನಡೆದಿದೆ.

ಮಂಗಳೂರಿನ ಕಸಬ ಬೆಂಗ್ರೆಯ ನಿವಾಸಿ ನವಾಝ್(35) ಬದುಕುಳಿದ ಮೀನುಗಾರ. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆ ಬಾಗಿಲಿನತ್ತ ಹಿಂದಿರುಗುತ್ತಿದ್ದಾಗ ಸಮುದ್ರದ ನಡುವೆ ಕೆಟ್ಟು ನಿಂತಿತ್ತು. ಈ ಸಂದರ್ಭ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದರು. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

ಈ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ನವಾಝ್ ಸಮುದ್ರ ಪಾಲಾಗಿದ್ದರು. ಆದರೆ ಅವರು ಅರ್ಧ ಗಂಟೆ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಮೀನುಗಾರರಿಂದ ರಕ್ಷಣೆಗೊಳಗಾಗಿದ್ದಾರೆ. ಇದನ್ನೂ ಓದಿ: ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ, ರಿತೀಶ್ ಹೊಯ್ಗೆ ಬಜಾರ್ ರಿಂದ ನವಾಝ್ ರನ್ನು ರಕ್ಷಣೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Source: publictv.in Source link