ಮುಂದುವರೆದ ಭಾರತದ ಪದಕದ ಬೇಟೆ; ಜಾವೆಲಿನ್ ಥ್ರೋನಲ್ಲಿ ಬೆಳ್ಳಿ, ಕಂಚು ಗೆದ್ದ ಕ್ರೀಡಾಪಟುಗಳು

ಮುಂದುವರೆದ ಭಾರತದ ಪದಕದ ಬೇಟೆ; ಜಾವೆಲಿನ್ ಥ್ರೋನಲ್ಲಿ ಬೆಳ್ಳಿ, ಕಂಚು ಗೆದ್ದ ಕ್ರೀಡಾಪಟುಗಳು

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಶೂಟಿಂಗ್​ನಲ್ಲಿ 19 ವರ್ಷದ ಅವನಿ ಲೇಖರ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದರೆ, ಡಿಸ್ಕರ್​ ಥ್ರೋನಲ್ಲಿ ಯೋಗಿಶ್​ ಬೆಳ್ಳಿ ಗೆದ್ದ ಸಾಧನೆ ಮಾಡಿದರು. ಈ ಬೆನ್ನಲ್ಲೇ ಈಗ ಜಾವಲೀನ್ ಥ್ರೋನಲ್ಲಿ ಭಾರತಕ್ಕೆ ಎರಡು ಪದಕಗಳು ಒಲಿದಿವೆ.

ಪುರುಷರ ವಿಭಾಗದ ಎಫ್​46 ಫೈನಲ್​ನಲ್ಲಿ ದೇವೇಂದ್ರ ಬೆಳ್ಳಿ ಪದಕಕ್ಕೆ ಮುತ್ತಿಟ್ಟರೆ, ಸುಂದರ್ ಗುರ್ಜರ್ ಸಿಂಗ್ ಕಂಚಿನ ಪದಕಕ್ಕೆ ಗೆಲ್ಲುವಲ್ಲಿ ಯಶಸ್ವಿಯಾದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್​ ಸುತ್ತಿನಲ್ಲಿ ಲಂಕಾದ ದಿನೇಶ್​ ಪ್ರಿಯನ್, ದೇವೆಂದ್ರ, ಸುಂದರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ, ಲಂಕಾದ ದಿನೇಶ್​ ಪ್ರಿಯನ್ 67.79 ಮೀಟರ್​ನೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡರೆ, 64.35 ಮೀಟರ್ ದೂರ ಎಸೆದ ದೇವೇಂದ್ರ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು, ಇನ್ನೂ 64.01 ಮೀಟರ್​ ದೂರ ಎಸೆದಿದ್ದ ಸುಂದರ್ ಗುರ್ಜರ್​ ಸಿಂಗ್ 3ನೇ ಸ್ಥಾನ ಕಾಯ್ದುಕೊಂಡು ಕಂಚಿಗೆ ತೃಪ್ತಿಪಟ್ಟರು..

Source: newsfirstlive.com Source link