ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಗೋವಿಂದಪುರ ಡ್ರಗ್ ಕೇಸ್​ಗೆ ಸಂಬಂಧಿಸಿದಂತೆ ಇಂದು ಪೊಲೀಸರು ಹಲವು ಸೆಲಿಬ್ರಿಟಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ವಚನ್ ಚಿನ್ನಪ್ಪ, ಸೋನಿಯಾ ಅಗರ್​ವಾಲ್, ಭರತ್ ಎಂಬುವವರ ಮನೆಗಳ ಮೇಲೆ ಈ ದಾಳಿ ನಡೆದಿದೆ.

ಹಾಗಾದ್ರೆ ಯಾರಿವರೆಲ್ಲ ಅಂತ ನೋಡೋದಾದ್ರೆ.. ವಚನ್ ಚಿನ್ನಪ್ಪ ಮ್ಯೂಸಿಕ್ ಬ್ಯಾಂಡ್ ನಡೆಸುವವನು.. ಇನ್ನು ಸೋನಿಯಾ ಅಗರ್​ವಾಲ್ ಆರ್ಗಾನಿಕ್ ಕಾಸ್ಮೆಟಿಕ್ ಬ್ಯುಸಿನೆಸ್ ನಡೆಸ್ತಿದ್ದಾರೆ. ಇತ್ತ ಭರತ್ ಬನಶಂಕರಿ ರಿಯಲ್ ಎಸ್ಟೇಟ್ ಉದ್ಯಮಿ ಎನ್ನಲಾಗಿದೆ. ಇವರೆಲ್ಲರೂ ಥಾಮಸ್ ಜೊತೆಗೆ ಸಂಪರ್ಕ ಹೊಂದಿದ್ದರಂತೆ. ಇನ್ನು ಭರತ್ ಬಲ್ದೋತಾ ಲಕ್ಷುರಿಯಾ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್ ಹೊಂದಿದ್ದಾನೆ ಎಮದು ಹೇಳಲಾಗಿದೆ. ಈ ಅಪಾರ್ಟ್​​ಮೆಂಟ್​ನಲ್ಲಿ ಆಗಾಗ ಪಾರ್ಟಿ ನಡೀತಾ ಇತ್ತು.. ಸ್ಥಳೀಯ ನಿವಾಸಿಗಳಿಗೂ ಕಾಟ ಕೊಡ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

ಥಾಮಸ್ ಅಲಿಯಾಸ್ ಕಲು ನೈಜೀರಿಯನ್ ಡ್ರಗ್ ಪೆಡ್ಲರ್

ಇನ್ನು ಕಳೆದ ಆಗಷ್ಟ್ 12 ರಂದು ಅರೆಸ್ಟ್ ಆಗಿದ್ದ ಥಾಮಸ್ ಅಲಿಯಾಸ್ ಕಲು ನೈಜೀರಿಯನ್ ಡ್ರಗ್ ಪೆಡ್ಲರ್. ಈತ ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಥಾಮಸ್ ಕಲು ಮನೆ ಮೇಲೆ ದಾಳಿ ಮಾಡಿ ಗೋವಿಂದಪುರ ಇನ್ಸ್’ಪೆಕ್ಟರ್ ಪ್ರಕಾಶ್ ಬಂಧಿಸಿದ್ದರು. ದಾಳಿ ವೇಳೆ 15.50 ಲಕ್ಷ ಮೌಲ್ಯದ 403 ಎಕ್ಸ್’ಟೆಸಿ ಪಿಲ್ಸ್ ವಶಪಡಿಸಿಕೊಳ್ಳಲಾಗಿತ್ತು.

ಕೊಕೇನ್ ಒಂದು ಗ್ರಾಂ ಗೆ 15 ಸಾವಿರಕ್ಕೆ ಮಾರಾಟ

ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಈತ ಎಕ್ಸ್’ಟೆಸಿ ಪಿಲ್ಸ್ ಕೊಡ್ತಿದ್ದನಂತೆ.. ಸೆಲೆಬ್ರೆಟಿಗಳಿಗೆ ಕೊಡ್ತಿದಿದ್ದು ಮಾತ್ರ ಕಾಸ್ಟ್ಲಿಯೆಸ್ಟ್ ಕೊಕೇನ್ ಸಿಂಥೆಟಿಕ್ ಡ್ರಗ್ ಅಂತೆ. 350 ರೂಪಾಯಿಗೆ ಒಂದು ಎಕ್ಸ್’ಟೆಸಿ ಪಿಲ್ಸ್ ಖರೀದಿ ಮಾಡಿ ಒಂದು ಟ್ಯಾಬ್ಲೆಟ್ ಗೆ 3 ಸಾವಿರಕ್ಕೆ ಮಾರಾಟ ಮಾಡ್ತಿದ್ದನಂತೆ. ಕೊಕೇನ್ ಒಂದು ಗ್ರಾಂ ಗೆ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದನಂತೆ.

ಥಾಮಸ್ ಕೇವಲ ಡ್ರಗ್ ಪೆಡ್ಲರ್ ಮಾತ್ರವಲ್ಲ ಕ್ರಿಮಿನಲ್ ಮೈಂಡೆಡ್ ಅಬಿಚೂವಲ್ ಅಫೆಂಡರ್ ಕೂಡ

ಥಾಮಸ್ ಕೇವಲ ಡ್ರಗ್ ಪೆಡ್ಲರ್ ಮಾತ್ರವಲ್ಲ ಕ್ರಿಮಿನಲ್ ಮೈಂಡೆಡ್ ಅಬಿಚೂವಲ್ ಅಫೆಂಡರ್ ಕೂಡ ಆಗಿದ್ದ. ಇನ್ನು ಥಾಮಸ್​​ನ ನಟೋರಿಯೆಸ್ ಹಿಸ್ಟರಿ ಬೆಚ್ಚಿಬೀಳಸುವಂತಿದೆ.

blank

ಸ್ಯಾಂಡಲ್ವುಡ್ ಡ್ರಗ್ ಕೇಸ್ ಹೊರಬರ್ತಿದ್ದಂತೆ ಸಿಸಿಬಿ ಲಾಕ್ ಮಾಡತ್ತೆ ಅನ್ನೋದನ್ನ ಥಾಮಸ್ ತಿಳಿದಿದ್ದನಂತೆ. ಸಿಸಿಬಿ ಕೈಗೆ ಲಾಕ್ ಆದ್ರೆ ತನ್ನ ನೆಟ್ವರ್ಕ್ ಹೊರಬರತ್ತೆ ಅಂತ ಮಾಸ್ಟರ್ ಪ್ಲಾನ್ ಮಾಡಿದ್ದನಂತೆ. ಕಳೆದ ವರ್ಷ ಕೆ.ಆರ್.ಪುರಂ ಪೊಲೀಸರಿಗೆ ಡ್ರಾಮಾ ಮಾಡಿ ಸೆರೆಂಡರ್ ಆಗಿದ್ದ ಥಾಮಸ್ ಪೊಲೀಸ್ ವೆಹಿಕಲ್ ಚೆಕಿಂಗ್ ವೇಳೆ ಆನ್ಲೈನ್ ನಲ್ಲಿ ಬೈಕ್ ಬುಕ್ ಮಾಡಿ ವಿತೌಥ್ ಹೆಲ್ಮೆಟ್ ಡ್ರೈವ್ ಬಂದಿದ್ದನಂತೆ.

ಹೆಲ್ಮೆಟ್ ಧರಿಸದೇ ಬಂದು ಪೊಲೀಸರ ಮುಂದೆ ಕ್ಯಾತೆ ತೆಗೆದಿದ್ದ ಥಾಮಸ್

ಡ್ರಗ್ ಸೇವನೆ ಮಾಡಿ ಆನ್ಲೈನ್ ಬೈಕ್ ಬುಕ್ ಮಾಡಿ ಹೆಲ್ಮೆಟ್ ಧರಿಸದೇ ಬಂದು ಪೊಲೀಸರ ಮುಂದೆ ಕ್ಯಾತೆ ತೆಗೆದಿದ್ದ ಥಾಮಸ್ ವಿರುದ್ಧ ಮಾದಕವಸ್ತು ಸೇವಿಸಿ ವಾಹನ ಚಲಾವಣೆ ಮಾಡಿರೋದಾಗಿ ಕೆ.ಆರ್.ಪುರಂ ನಲ್ಲಿ ಕೇಸ್ ಫಿಟ್ ಆಗಿತ್ತು. ಡ್ರಗ್ ಪೆಡ್ಲರ್ ಥಾಮಸ್​ಗೂ ಇದೇ ಬೇಕಾಗಿತ್ತು ಎನ್ನಲಾಗಿದೆ. ಡ್ರಗ್ ಕನ್ಸೂಮ್, ಟ್ರಾಫಿಕ್ ರೂಲ್ಸ್ ವೈಲೆಷನ್ ಹಾಗೂ NDMA ಅಡಿ ಫಿಟ್ ಆಗಿ ಅಂದರ್ ಆಗಿದ್ದ ಥಾಮಸ್ ಕಡೆ ಸಿಸಿಬಿ ಗಮನ ಹರಿಸಿರಲಿಲ್ಲವಂತೆ. ಥಾಮಸ್ ಸೆಲೆಬ್ರೆಟಿಗಳ ಜೊತೆ ಲಿಂಕ್ ಇರೋದು ಬೆಳಕಿಗೆ ಬಾರದೇ ಅಂದರ್ ಆಗಿದಿದ್ದು ಸೆಲೆಬ್ರೆಟಿಗಳಿಗೂ ಸಮಾಧಾನ ತಂದಿತ್ತು ಎಂದು ಹೇಳಲಾಗಿದೆ.

Source: newsfirstlive.com Source link