ಅಡ್ಡಾದಿಡ್ಡಿ ಬೈಕ್​ ಓಡಿಸಿ ಬಸ್​ಗೆ ದಾರಿ ಬಿಡದ ಯುವಕ; ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು

ಅಡ್ಡಾದಿಡ್ಡಿ ಬೈಕ್​ ಓಡಿಸಿ ಬಸ್​ಗೆ ದಾರಿ ಬಿಡದ ಯುವಕ; ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು

ಹಾಸನ : ಸಾರಿಗೆ ಬಸ್​ಗೆ ದಾರಿ ಬಿಡದೇ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್​ ಓಡಿಸುತ್ತಾ ಪುಂಡಾಟ ನಡೆಸಿದ್ದ ಯವಕನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್‌.ಪುರ ಬಳಿ ನಡೆದಿದೆ.

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸುತ್ತ ಬಸ್​ಗೆ ದಾರಿ ಕೊಡದ ಯುವಕ, ಬೈಕ್​ನಲ್ಲಿ ಪದೇ ಪದೇ ಬಸ್​ಗೆ ಅಡ್ಡ ಬಂದು ಕಿರಿಕಿರಿ ಉಂಟು ಮಾಡುತ್ತಿದ್ದ.

 

ಯುವಕನ ಕೀಟಲೆಯ ದೃಶ್ಯಗಳನ್ನು ಪ್ರಯಾಣಿಕರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಹೀಗೆ ರಸ್ತೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಯುವಕನನ್ನು ಹಿಡಿದ ಸಾರ್ವಜನಿಕರು ಬರೋಬ್ಬರಿ ಗೂಸಾ ಕೊಟ್ಟಿದ್ದಾರೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

Source: newsfirstlive.com Source link