ಐಪಿಎಲ್ ಟೂರ್ನಿಯಿಂದ RCB ಆಲ್​ರೌಂಡರ್ ವಾಶಿಂಗ್ಟನ್ ಸುಂದರ್ ಔಟ್

ಐಪಿಎಲ್ ಟೂರ್ನಿಯಿಂದ RCB ಆಲ್​ರೌಂಡರ್ ವಾಶಿಂಗ್ಟನ್ ಸುಂದರ್ ಔಟ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಲ್​ರೌಂಡರ್ ವಾಶಿಂಗ್ಟನ್ ಸುಂದರ್, ಸೆಪ್ಟೆಂಬರ್ 19ರಿಂದ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಇಂಗ್ಲೆಂಡ್​​ನಲ್ಲಿ ಸೆಲೆಕ್ಟ್ ಇಲೆವೆನ್​ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಸುಂದರ್​ ಬೆರಳಿಗೆ ಗಾಯಮಾಡಿಕೊಂಡಿದ್ರು. ಆದ್ರೆ ಬೆರಳಿನ ಗಾಯದಿಂದ ಆಲ್​ರೌಂಡರ್ ಇನ್ನೂ ಚೇತರಿಸಿಕೊಳ್ಳದ ಕಾರಣ, ಕೆಲ ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ. ವಾಶಿಂಗ್ಟನ್ ಸುಂದರ್ ಬದಲಿಗೆ ಬೆಂಗಾಲ್​​ನ ಆಕಾಶ್ ದೀಪ್, ಆರ್​ಸಿಬಿ ತಂಡವನ್ನ ಸೇರಿಕೊಳ್ಳಲಿದ್ದಾರೆ. ​​

Source: newsfirstlive.com Source link