ಶ್ರೀಕೃಷ್ಣನ ವೇಶದಲ್ಲಿ ಚಿರು ಪುತ್ರ.. ‘ಇವನೇ ನನ್ನ ಬೆಣ್ಣೆ ಮುದ್ದು ಬಂಗಾರ’ ಎಂದ ಮೇಘನಾರಾಜ್

ಶ್ರೀಕೃಷ್ಣನ ವೇಶದಲ್ಲಿ ಚಿರು ಪುತ್ರ.. ‘ಇವನೇ ನನ್ನ ಬೆಣ್ಣೆ ಮುದ್ದು ಬಂಗಾರ’ ಎಂದ ಮೇಘನಾರಾಜ್

ನಟಿ ಮೇಘನಾ ರಾಜ್​ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ ಜೂನಿಯರ್​ ಚಿರು ಪೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್​ ಮಾಡುತ್ತಿರುತ್ತಾರೆ. ಅದರಂತೆ ಇಂದು ಕೃಷ್ಣ ಜನ್ಮಾಷ್ಠಮಿ ಹಬ್ಬದ ಪ್ರಯುಕ್ತ ನಟಿ ಮೇಘನಾ ರಾಜ್​ ಜೂನಿಯರ್ ಚಿರುನ ಮುದ್ದಾದ ಕೃಷ್ಣನ ಅವತಾರದಲ್ಲಿರೋ ಪೋಟೋವೊಂದನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

blank

ಹೌದು ನಟಿ ಮೇಘನಾ ರಾಜ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜೂನಿಯರ್​ಗೆ ಚಿರುಗೆ ಕೃಷ್ಣನ ವೇಷವನ್ನು ಹಾಕಿಸಿದ್ದಾರೆ. ಜೊತೆಗೆ ಚಿರಂಜೀವಿ ಸರ್ಜಾ ಆಪ್ತ ಗೆಳಯ ಪನ್ನಗಾ ಭರಣ ಪುತ್ರ ,ವೇದ್​ ಭರಣ ಕೂಡ ಕೃಷ್ಣ ವೇಷ ಧರಿಸಿದ್ದು ,ಜೂನಿಯರ್​ ಚಿರು ಜೊತೆ ಪೋಟೋಶೂಟ್​ ಕೂಡ ಮಾಡಿಸಿದ್ದಾರೆ. ಇನ್ನು ಈ ಪುಟ್ಟ ಮುದ್ದು ಕೃಷ್ಣನ ಫೋಟೋ ಹಂಚಿಕೊಂಡ ಮೇಘನಾ ಇವನೇ ನನ್ನ ಬೆಣ್ಣೆ ಮುದ್ದು ಬಂಗಾರ ಅಂತಾ ಬರೆದುಕೊಂಡು ಅಭಿಮಾನಿಗಳಿಗೆ ಕೃಷ್ಣ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಜೂನಿಯರ್​ ಚಿರುನ ಈ ಮುದ್ದಾದ ಪೋಟೋವನ್ನು ಕಂಡ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

Source: newsfirstlive.com Source link