4ನೇ ಟೆಸ್ಟ್​ಗೆ ಬದಲಾವಣೆ ಮುನ್ಸೂಚನೆ ನೀಡಿದ ವಿರಾಟ್: ಅನುಭವಿ ಆಟಗಾರರಿಗೆ ವಿಶ್ರಾಂತಿ ಖಾಯಂ?

4ನೇ ಟೆಸ್ಟ್​ಗೆ ಬದಲಾವಣೆ ಮುನ್ಸೂಚನೆ ನೀಡಿದ ವಿರಾಟ್: ಅನುಭವಿ ಆಟಗಾರರಿಗೆ ವಿಶ್ರಾಂತಿ ಖಾಯಂ?

ಇಂಗ್ಲೆಂಡ್ ಪ್ರವಾಸದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಟೀಮ್ ಇಂಡಿಯಾ ಡಲ್​ ಆದಂತೆ ಕಾಣ್ತಿದೆ. ಬ್ಯಾಟಿಂಗ್‌ ವಿಭಾಗವಂತೂ ದುರ್ಬಲವಾಗಿರೋದು ಸ್ಪಷ್ಟ..! ಮಾಡಿದ ಕೆಲ ತಪ್ಪುಗಳಿಂದ ಹೀನಾಯ ಸೋಲಿನ ಮುಖಭಂಗ ಅನುಭವಿಸಿರೋ ಟೀಮ್ ಇಂಡಿಯಾ, ಇದೀಗ ತಂಡದಲ್ಲಿ ಬದಲಾವಣೆಗೆ ಮುಂದಾಗ್ತಿದೆ.

blank

ಲೀಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಇನ್ನಿಂಗ್ಸ್​ ಹಾಗೂ 76 ರನ್​​​​​ಗಳಿಂದ ಟೀಮ್ ಇಂಡಿಯಾವನ್ನ ಮಣಿಸಿದ ಇಂಗ್ಲೆಂಡ್, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದರೊಂದಿಗೆ ಉಳಿದೆರಡು ಪಂದ್ಯಗಳ ಕಾದಾಟದ ಕಾವು ಇನ್ನಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಕೆಟ್ಟ ಪ್ರದರ್ಶನ ಹಾಗೂ ತಪ್ಪು ನಿರ್ಣಯಗಳಿಂದ ಪಂದ್ಯ ಕೈ ಚೆಲ್ಲಿದ ಟೀಮ್ ಇಂಡಿಯಾ, ಸರಣಿ ಗೆಲ್ಲಬೇಕಾದರೆ ಕೆಲ ಬದಲಾವಣೆಗಳನ್ನ ಮಾಡೋದು ಅನಿವಾರ್ಯವಾಗಿದೆ.

ರಹಾನೆ ಬದಲಿಗೆ ಸೂರ್ಯ ಕುಮಾರ್​ ಯಾದವ್..?

ಲಾರ್ಡ್ಸ್​ನಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದ ರಹಾನೆ, ಈಗ ಲೀಡ್ಸ್​ನಲ್ಲಿ ಮತ್ತೊಮ್ಮೆ ವೈಫಲ್ಯ ಕಂಡಿದ್ದಾರೆ. ಇದು ರಹಾನೆಗೆ ಮತ್ತೆ ಅವಕಾಶ ನೀಡಬೇಕಾ ಎಂಬ ಪ್ರಶ್ನೆಯನ್ನ ಹುಟ್ಟುಹಾಕಿದೆ. ಅಷ್ಟೆ ಅಲ್ಲ..! ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಿರುವ ಆಟಗಾರರಿಗೆ ರೆಸ್ಟ್​ ನೀಡುವ ಚಿಂತನೆಯೂ ಮ್ಯಾನೇಜ್​ಮೆಂಟ್ ಲೆವೆಲ್​ನಲ್ಲಿ ನಡೆದಿದೆ. ಹೀಗಾಗಿ ಉಪ ನಾಯಕ ರಹಾನೆಗೆ ವಿಶ್ರಾಂತಿ ನೀಡಿ ಸೂರ್ಯಕುಮಾರ್ ಅವಕಾಶ ನೀಡೋ ಸಾಧ್ಯತೆ ಇದೆ.

blank

ಜಡೇಜಾ ಬದಲಿಗೆ ಅಶ್ವಿನ್ ಆಡೋದು ಪಕ್ಕಾ..!

ಲೀಡ್ಸ್​ ಸೋಲಿನ ಅಘಾತದ ನಡುವೆ ಟೀಮ್ ಇಂಡಿಯಾಕ್ಕೆ ಮತ್ತೊಂದು ಸೆಟ್ ಬ್ಯಾಕ್ ಆಗಿದೆ. ಫೀಲ್ಡಿಂಗ್ ವೇಳೆ ರವೀಂದ್ರ ಜಡೇಜಾ ಮೊಣಕಾಲಿನ ಇಂಜುರಿಗೆ ಒಳಗಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಕ್ಯಾನ್ ಮಾಡಲಾಗಿದೆ. ಇಂಜುರಿ ಹೊರತಾಗಿ ಜಡೇಜಾ ಫಿಟ್​ ಆದ್ರೂ, ನಾಲ್ಕನೇ ಟೆಸ್ಟ್​​ನಲ್ಲಿ​ ಅವಕಾಶ ಸಿಗೋದು ಅನುಮಾನವೇ ಆಗಿದೆ. ಮೂರು ಪಂದ್ಯಗಳಲ್ಲಿ ಇಂಫ್ಯಾಕ್ಟ್​ ಫುಲ್​ ಪ್ರದರ್ಶನ ನೀಡದ ಜಡ್ಡು ಬದಲು ಆಫ್ ಸ್ಪಿನ್ನರ್ ಆಶ್ವಿನ್, ಕಮ್​​ಬ್ಯಾಕ್ ಮಾಡೋದು ಬಹುತೇಕ ಪಕ್ಕಾ ಆಗಿದೆ.

blank

ಇಶಾಂತ್​ಗೆ ರೆಸ್ಟ್.. ಶಾರ್ದೂಲ್​ಗೆ ಸ್ಥಾನ…!

ಲಾರ್ಡ್ಸ್​ ಟೆಸ್ಟ್​ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಇಶಾಂತ್ ಶರ್ಮಾ, ಲೀಡ್ಸ್​ ಟೆಸ್ಟ್​ಗೆ ಫಿಟ್​ ಇಲ್ಲದೆಯೂ ಕಣಕ್ಕಿಳಿಸಿದ್ದರು. ಆದ್ರೆ, ಈ ಪಂದ್ಯದಲ್ಲಿ ವಿಕೆಟ್ ಇರಲಿ, ಬೌಲಿಂಗ್​ ರಿದಮ್​ ಕೂಡ ಕಾಣಲಿಲ್ಲ. ಹೀಗಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ತಂಡಕ್ಕೆ ನೆರವಾಗಬಲ್ಲ ಶಾರ್ದೂಲ್, ಕೆನ್ನಿಂಗ್ಟನ್​​ ಓವಲ್​​​​​ನಲ್ಲಿ ಇಶಾಂತ್ ಸ್ಥಾನದಲ್ಲಿ ಕಣಕ್ಕಿಳಿಯೋ ಸಾಧ್ಯತೆಯಿದೆ. ಇದೆಲ್ಲದರ ಜೊತೆಗೆ ವೇಗಿ ಉಮೇಶ್​ ಯಾದವ್​​ಗೆ ಹನ್ನೊಂದರಲ್ಲಿ ಸ್ಥಾನ ಕಲ್ಪಿಸುವ ಇರಾದೆಯೂ ಮ್ಯಾನೇಜ್​ಮೆಂಟ್​ ಮುಂದಿದೆ.

Source: newsfirstlive.com Source link