ಕೃಷ್ಣ ಜನ್ಮಾಷ್ಟಮಿಗೆ ಗಿಫ್ಟ್​ ನೀಡಿದ ಡಾರ್ಲಿಂಗ್​ ಪ್ರಭಾಸ್​..’ರಾಧೆ ಶ್ಯಾಮ್‌’ ಪೋಸ್ಟರ್ ರಿಲೀಸ್​

ಕೃಷ್ಣ ಜನ್ಮಾಷ್ಟಮಿಗೆ ಗಿಫ್ಟ್​ ನೀಡಿದ ಡಾರ್ಲಿಂಗ್​ ಪ್ರಭಾಸ್​..’ರಾಧೆ ಶ್ಯಾಮ್‌’ ಪೋಸ್ಟರ್ ರಿಲೀಸ್​

ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಡಾರ್ಲಿಂಗ್​ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಧೆ ಶ್ಯಾಮ್‌’ ಸಿನಿಮಾದ ಹೊಸ ಪೋಸ್ಟರ್ ಒಂದನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​ ಮತ್ತು ಪೂಜಾ ಇಬ್ಬರು ಕ್ಲಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೆ ಪೋಸ್ಟರ್​, ಟೀಸರ್​ಗಳಿಂದ ಪ್ರೇಕ್ಷಕರ ಗಮನ ಸೆಳೆದಿರೋ ‘ರಾಧೆ ಶ್ಯಾಮ್‌’ ಸಿನಿಮಾ ರೆಟ್ರೋ ಕಾಲದ ಲವ್ ಸ್ಟೋರಿ ಕಥೆಯನ್ನ ಹೊಂದಿದೆ. ನಿರ್ದೇಶಕ ರಾಧಕೃಷ್ಣ ಕುಮಾರ್ ಕಲ್ಪನೆಯಲ್ಲಿ ‘ರಾಧೆ ಶ್ಯಾಮ್‌’ ಚಿತ್ರ ಮೂಡಿ ಬರುತ್ತಿದ್ದು, 2022 ಸಂಕ್ರಾಂತಿ ಹಬ್ಬದ ದಿನ ಜನವರಿ 14 ರಂದು ಬರಲಿದೆ.

ಇನ್ನು ಕೊರೊನಾ ಎರಡನೇ ಅಲೆ ಬಾರದೆ ಹೋಗಿದ್ರೆ ಜುಲೈ 31 ನೇ ತಾರೀಕು ರಾಧೆ ಶ್ಯಾಮ್​ ಚಿತ್ರ ರಿಲೀಸ್ ಆಗ್ತಿತ್ತು. ಅದ್ರೆ ಇದೀಗ ‘ರಾಧೆ ಶ್ಯಾಮ್‌’ ಚಿತ್ರ ಮುಂದಿನ ಸಂಕ್ರಾಂತಿಗೆ ಬರೋದಾಗಿ ಹೇಳಿದೆ. ಪ್ರಭಾಸ್​ ಫ್ಯಾನ್ಸ್​ ‘ರಾಧೆ ಶ್ಯಾಮ್‌’ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾದು ಕುಳಿದ್ದಾರೆ. ಪ್ರಭಾಸ್​ ಸದ್ಯ ‘ಸಲಾರ್‌’ ‘ಆದಿಪುರುಷ್’ ಚಿತ್ರದ ಶೂಟಿಂಗ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.

Source: newsfirstlive.com Source link