ಶಾಸಕ ರೇಣುಕಾಚಾರ್ಯ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

ಶಾಸಕ ರೇಣುಕಾಚಾರ್ಯ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

ದಾವಣಗೆರೆ:  ಶಾಸಕ ರೇಣುಕಾಚಾರ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದ ಘಟನೆ ಜಿಲ್ಲೆಯ ಹಿನ್ನಾಳಿ ಪಟ್ಟಣದ ಚನ್ನಪ್ಪಸ್ವಾಮಿ ಸಮುದಾಯದಲ್ಲಿ ನಡೆದಿದೆ.

blank

ಹೊನ್ನಾಳಿಯ ಸಮುದಾಯದಲ್ಲಿ, ಮಹಿಳೆಯರಿಗಾಗಿ ಕಾರ್ಯಕ್ರಮ ನಡೆಯುತಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶಾಸಕ ರೇಣುಕಾಚಾರ್ಯ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ, ಸ್ವ-ಸಹಾಯ ಸಂಘಗಳಿಗೆ ಕಿರು ಉದ್ಯಮ ಸಾಲ ಹಾಗೂ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣಾ ವೇಳೆ, ಶಾಸಕರ ಜೊತೆ, ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ, ಸಂಸದರು ಆಗಮಿಸಿದ್ದರು, ಆದ್ರೆ ಮಹಿಳೆಯರು, ಸಂಸದರನ್ನ ಬಿಟ್ಟು ಕೇವಲ ರೇಣುಕಾಚಾರ್ಯ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ರು.

blank

Source: newsfirstlive.com Source link