ಸೂರ್ಯಗೆ​​ ಚಾನ್ಸ್​ ನೀಡಿ ಅಂದ ಮಾಜಿ ಪ್ಲೇಯರ್ಸ್.. ಲಾಬಿ ನಡುವೆ ಕಳೆದುಹೋದ್ರಾ ಕನ್ನಡಿಗ ಮಯಾಂಕ್​?​

ಸೂರ್ಯಗೆ​​ ಚಾನ್ಸ್​ ನೀಡಿ ಅಂದ ಮಾಜಿ ಪ್ಲೇಯರ್ಸ್.. ಲಾಬಿ ನಡುವೆ ಕಳೆದುಹೋದ್ರಾ ಕನ್ನಡಿಗ ಮಯಾಂಕ್​?​

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾದಲ್ಲಿ ಬದಲಾವಣೆಯನ್ನ ಎಲ್ಲರೂ ಎದುರು ನೋಡ್ತಿದ್ದಾರೆ. ಅದರಲ್ಲೂ ಬಳಲಿರುವ ಮಿಡಲ್​ ಆರ್ಡರ್​​ಗೆ ಸರ್ಜರಿ ಮಾಡಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಯುವ ಆಟಗಾರ ಸೂರ್ಯಕುಮಾರ್​​ಗೆ ಅವಕಾಶ ನೀಡಬೇಕು ಅನ್ನೋದು ಹಲವರ ಮಾತಾಗಿದೆ. ಈ ಅಬ್ಬರದ ನಡುವೆ ನಮ್ಮ ಕನ್ನಡಿಗ ಕಳೆದೇ ಹೋಗಿದ್ದಾನೆ.

blank

ಇಂಗ್ಲೆಂಡ್​​ ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಟೀಮ್​ ಇಂಡಿಯಾ ಮಿಡಲ್​ ಆರ್ಡರ್​ ವಿಭಾಗ ಕಳಪೆ ಪ್ರದರ್ಶನವನ್ನ ನೀಡಿದೆ. ಎಷ್ಟರ ಮಟ್ಟಿಗೆ ಅಂದ್ರೆ, 4ನೇ ಟೆಸ್ಟ್​​ನಲ್ಲಿ ಈ ವಿಭಾಗಕ್ಕೆ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಒಂದು ವೇಳೆ ಮಧ್ಯಮ ಕ್ರಮಾಂಕಕ್ಕೆ ಸರ್ಜರಿ ಮಾಡಿದ್ರೆ, ಯಾರಿಗೆ ಅವಕಾಶ ನೀಡಬೇಕು ಅನ್ನೋ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಹಲವು ಕ್ರಿಕೆಟ್​ ವಿಶ್ಲೇಷಕರು, ಮಾಜಿ ಕ್ರಿಕೆಟರ್ಸ್​ ಮಾತನಾಡಿದ್ದು, ಎಲ್ಲರೂ ಮುಂಬೈಕರ್​​ ಸೂರ್ಯಕುಮಾರ್​ ಪರ ಬ್ಯಾಟ್​ ಬೀಸಿದ್ದಾರೆ.

ಸೂರ್ಯಕುಮಾರ್​​ಗೆ ಚಾನ್ಸ್​​ ನೀಡುವಂತೆ ಹಲವರ ಬ್ಯಾಟಿಂಗ್​​​..!
ಮಾಜಿ ಮುಂಬೈಕರ್ಸ್​​ ಲಾಬಿ ನಡುವೆ ಕಳೆದು ಹೋದ್ರಾ ಕನ್ನಡಿಗ​..

blank

ಯೆಸ್​​..! ಇಂಗ್ಲೆಂಡ್​​ ಸರಣಿ ಆರಂಭಕ್ಕೂ ಮುನ್ನ ಶುಭಮನ್​ ಗಿಲ್​ ಅಲಭ್ಯತೆಯಲ್ಲಿ ಮಯಾಂಕ್​ ಇನ್ನಿಂಗ್ಸ್​ ಆರಂಭಿಸಿಸ್ತಾರೆ ಎನ್ನಲಾಗಿತ್ತು. ಆದ್ರೆ, ನೆಟ್ಸ್​​ ಸೆಷನ್​ನಲ್ಲಿ ಮಯಾಂಕ್​ ಇಂಜುರಿಗೆ ತುತ್ತಾದ ಕಾರಣ ರಾಹುಲ್​ ಪಾಲಿಗೆ ಅವಕಾಶದ ಬಾಗಿಲು ತೆರೆದಿತ್ತು. ಈ ಅದೃಷ್ಟದ ಅವಕಾಶದಲ್ಲಿ ಕೆಎಲ್​ ಮಿಂಚಿದ ಪರಿಣಾಮ ಮಯಾಂಕ್​ ಅನಿವಾರ್ಯವಾಗಿ ಬೆಂಚ್​​ಗೆ ಸೀಮಿತವಾಗಿದ್ದಾರೆ. ಇದೀಗ ಮಿಡಲ್​ ಆರ್ಡರ್​​ ಅವಕಾಶದ ವಿಚಾರದಲ್ಲೂ ಸೂರ್ಯನ ಅಬ್ಬರದ ನಡುವೆ ಕಳೆದು ಹೋಗಿದ್ದಾರೆ.

ಮಿಡಲ್​ ಆರ್ಡರ್​​ನಲ್ಲಿ ಸೂರ್ಯಕುಮಾರ್​ಗೆ ಆಡುವ ಸಾಮರ್ಥ್ಯವಿದೆ ಅನ್ನೋದರ ಜೊತೆಗೆ ಈವರೆಗೆ ಟೆಸ್ಟ್​ ಆಡಿಲ್ಲ ಅನ್ನೋ ಹಿನ್ನಡೆಯೂ ಇದೆ. ಆದ್ರೆ, ಮಯಾಂಕ್​ ಅಗರ್​ವಾಲ್​ಗೆ ಈ ಟೆಸ್ಟ್​​ ಕ್ರಿಕೆಟ್​ ಆಡಿದ ಅನುಭವವಿದೆ. ಆರಂಭಿಕನಾಗಿ ಮಾತ್ರವಲ್ಲದೇ ಮಿಡಲ್​ ಆರ್ಡರ್​ನಲ್ಲೂ ಅಗರ್​ವಾಲ್​ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದೆಲ್ಲಕ್ಕಿಂತ ವಿದೇಶದಲ್ಲಿ ಆಡಿದ ಅನುಭವ ಕನ್ನಡಿಗನಿಗಿದೆ. ಹೀಗಿದ್ದೂ ಮಿಡಲ್​ ಆರ್ಡರ್​ ಸರ್ಜರಿ ವಿಚಾರದಲ್ಲಿ ಮಯಾಂಕ್​ ಹೆಸರೇ ಕೇಳಿ ಬರ್ತಿಲ್ಲ.

ಇದನ್ನೂ ಓದಿ: ಕ್ರಿಕೆಟ್​​ಗೆ ಗುಡ್​ಬೈ ಹೇಳಿದ ಟೀಮ್ ಇಂಡಿಯಾ ಆಲ್​ರೌಂಡರ್ ಸ್ಟುವರ್ಟ್​ ಬಿನ್ನಿ

blank

ಈವರೆಗೆ ಟೆಸ್ಟ್​ ಮಾದರಿಯಲ್ಲಿ 23 ಇನ್ನಿಂಗ್ಸ್​ಗಳನ್ನಾಡಿರುವ ಮಯಾಂಕ್​ 1052 ರನ್​ಗಳಿಸಿದ್ದಾರೆ. 45.73ರ ಸರಾಸರಿಯಲ್ಲಿ ರನ್​ಗಳಿಸಿರೋ ಮಯಾಂಕ್​ 3 ಶತಕ, 4 ಅರ್ಧಶತಕ ಸಿಡಿಸಿದ್ದಾರೆ.

ಇಷ್ಟೆಲ್ಲಾ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿರುವ ಮಯಾಂಕ್​ ಆಯ್ಕೆಗೆ ಲಭ್ಯವಿದ್ರೂ, ಹಲ ಮಾಜಿ ಮುಂಬೈಕರ್​​ಗಳು ಮಾತ್ರ ಅನಾನುಭವಿ ಸೂರ್ಯನಿಗೆ ಮಣೆ ಹಾಕಿ ಅನ್ನೋ ಮಾತನ್ನಾಡುತ್ತಿದ್ದಾರೆ.ಸೂರ್ಯಕುಮಾರ್​ಗೆ ಸಾಮರ್ಥ್ಯವಿಲ್ಲ ಎಂದಲ್ಲ..ಆದ್ರೆ, ಟೆಸ್ಟ್ ಪದಾರ್ಪಣೆಯನ್ನೇ ಮಾಡದ ಆಟಗಾರರನ ಪರ ಮಾಜಿ ಮುಂಬೈಕರ್ಸ್​​ ಹೀಗೆ ದನಿ ಎತ್ತಿರುವಾಗ ಆಡಿದ ಅನುಭವ, ಉತ್ತಮ ಟ್ರ್ಯಾಕ್​​​ ರೆಕಾರ್ಡ್​ ಹೊಂದಿರುವ ಮಯಾಂಕ್​ ಪರ ಒಬ್ಬೇ ಒಬ್ಬ ಕರ್ನಾಟಕದ ಆಟಗಾರ ಸೊಲ್ಲೆತ್ತಿಲ್ಲ ಅನ್ನೋದೇ ವಿಪರ್ಯಾಸ..!!

Source: newsfirstlive.com Source link