ಓವಲ್​​​​ ಪಿಚ್​​ನಲ್ಲಿ 50 ವರ್ಷಗಳ ದಾಖಲೆಯನ್ನ ಅಳಿಸಿ ಹಾಕುತ್ತಾ ಟೀಂ ಇಂಡಿಯಾ.?

ಓವಲ್​​​​ ಪಿಚ್​​ನಲ್ಲಿ 50 ವರ್ಷಗಳ ದಾಖಲೆಯನ್ನ ಅಳಿಸಿ ಹಾಕುತ್ತಾ ಟೀಂ ಇಂಡಿಯಾ.?

ಲೀಡ್ಸ್​​ ಟೆಸ್ಟ್​​​ನ​ ಹೀನಾಯ ಸೋಲಿನ ಬಳಿಕ ಟೀಮ್​ ಇಂಡಿಯಾ ನಾಲ್ಕನೇ ಟೆಸ್ಟ್​​ನಲ್ಲಿ ಕಮ್​ಬ್ಯಾಕ್​ ಮಾಡೋ ಲೆಕ್ಕಾಚಾರದಲ್ಲಿದೆ. ಆದ್ರೆ ಕೆನ್ನಿಂಗ್ಟನ್​​ ಓವಲ್​ ಪರೀಕ್ಷೆಯಲ್ಲಿ ಪಾಸಾಗಬೇಕೆಂದ್ರೆ ತಂಡದಲ್ಲಿ ಬದಲಾವಣೆ ಮಾತ್ರವಲ್ಲ…! ಮಾಸ್ಟರ್​​ ಪ್ಲಾನ್​ ರೂಪಿಸೋದು ಕೂಡ ಅನಿವಾರ್ಯವಾಗಿದೆ. ಮೈದಾನದ ಟ್ರ್ಯಾಕ್​ ರೆಕಾರ್ಡ್​ ನೋಡಿದ್ರೆ, ನಿಮಗೂ ಹೀಗೆ ಅನ್ನಿಸದೆ ಇರದು.

ಸರಣಿ ಅಳಿವು ಉಳಿವಿನ ಲೆಕ್ಕಾಚಾರದಲ್ಲಿರೋ ವಿರಾಟ್ ಕೊಹ್ಲಿ ಪಡೆಗೆ ನಾಲ್ಕನೇ ಟೆಸ್ಟ್​ ಪಂದ್ಯದ ಗೆಲುವು ಅಗತ್ಯವಾಗಿದೆ. ಲಾರ್ಡ್ಸ್​​ನಲ್ಲಿ ಗೆದ್ದು, ಲೀಡ್ಸ್​​​​​​​ನಲ್ಲಿ​​​ ಸೋತ ಟೀಮ್​​​ ಇಂಡಿಯಾಗೆ ಇದೀಗ ಕೆನ್ನಿಂಗ್ಟನ್​ ಓವಲ್​ನಲ್ಲಿ 3ನೇ ಸವಾಲಿನತ್ತ ಚಿತ್ತ ನೆಟ್ಟಿದೆ. ಆದ್ರೆ, ಇಲ್ಲಿ ಬೌನ್ಸ್​ಬ್ಯಾಕ್​ ಮಾಡೋದು ಕೊಹ್ಲಿ ಪಡೆಗೆ ಸುಲಭವಲ್ಲ. ಟೀಮ್​ ಇಂಡಿಯಾ ಮುಂದೆ ದೊಡ್ಡ ಸವಾಲಿದೆ ಅನ್ನೋದನ್ನ ಈ ಪಿಚ್​​ನ ಕಳೆದ 50 ವರ್ಷಗಳ ಟ್ರ್ಯಾಕ್​ ರೆಕಾರ್ಡ್​ ಹೇಳ್ತಿದೆ.

blank

ಹೆಡಿಂಗ್ಲಿ ಪರೀಕ್ಷೆಯಲ್ಲಿ ಫೇಲಾದ ಟೀಮ್​ ಇಂಡಿಯಾ, ಓವಲ್ ಪರೀಕ್ಷೆಯಲ್ಲಿ 50 ವರ್ಷಗಳ ದಾಖಲೆ ಮುರಿಯುತ್ತಾ ಅನ್ನೋದು ಈಗ ಪ್ರಶ್ನೆಯಾಗಿದೆ. ಇಲ್ಲಿ ಇಂಡೋ -ಇಂಗ್ಲೆಂಡ್​ 13 ಟೆಸ್ಟ್​​ಗಳಲ್ಲಿ ಮುಖಾಮುಖಿಯಾಗಿದ್ದು, ಒಂದು ಸಲ ಮಾತ್ರ ಭಾರತ ಗೆದ್ದಿದೆ. ಅದೂ 1971ರಲ್ಲಿ…! ಇನ್ನು ಇಂಗ್ಲೆಂಡ್​​​​​ 5 ಬಾರಿ ಜಯಿಸಿದ್ದು, ಈ ಪೈಕಿ 3 ಬಾರಿ ಭಾರತ ಇನ್ನಿಂಗ್ಸ್​​ ಸೋಲುಂಡಿದೆ.

ಬ್ಯಾಟಿಂಗ್​ ಪಿಚ್​​​ನಲ್ಲಿ ​ಫಾರ್ಮ್​ನಲ್ಲಿಲ್ಲದ​​ ಬ್ಯಾಟರ್ಸ್​​ಗೆ ಅಗ್ನಿ ಪರೀಕ್ಷೆ.!

ಬ್ಯಾಟ್ಸ್​ಮನ್​ಗಳಿಗೆ ನಿರಾಸೆ ಮೂಡಿಸದ ಪಿಚ್​​ ಅಂದ್ರೆ ಅದು ಕೆನ್ನಿಂಗ್ಟನ್ ಓವಲ್​ ಪಿಚ್. ಇದೇ ಭಾರತಕ್ಕೆ ತಲೆನೋವು ತರಿಸಿರೋದು. ಸ್ಟಾರ್​ ಬ್ಯಾಟ್ಸ್​​ಮನ್​ಗಳ್ಯಾರೂ ಫಾರ್ಮ್​ನಲ್ಲಿಲ್ಲ. ವಿರಾಟ್​​ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ ಸ್ಥಿರ ಪ್ರದರ್ಶನ ನೀಡಿ 2 ವರ್ಷಗಳೇ ಉರುಳಿವೆ. ಇನ್ನು ರಿಷಭ್​ ಪಂತ್ ಸರಣಿಯಲ್ಲಿ​ ಭರವಸೆಯನ್ನೇ ಮೂಡಿಸಿಲ್ಲ. ಹೀಗಾಗಿ ಬ್ಯಾಟಿಂಗ್​​ ಸ್ನೇಹಿ ಪಿಚ್​​​ನಲ್ಲಿ ಇವರ ಪ್ರದರ್ಶನ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

blank

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ತಂಡಕ್ಕೆ ಕೆನ್ನಿಂಟನ್​ ಓವಲ್​ನಲ್ಲಿ ಗೆಲುವಿನ ಅವಕಾಶ ಹೆಚ್ಚಿದೆ. ಮೊದಲು ಬ್ಯಾಟಿಂಗ್​ ಮಾಡಿದವರೇ ಶೇಕಡಾ 80ರಷ್ಟು ಇಲ್ಲಿ ಗೆದ್ದಿರೋದು ಕೂಡ. ಮೊದಲ ಬ್ಯಾಟಿಂಗ್​​ನಲ್ಲಿ ರನ್​ ​​ಹೊಳೆ ಹರಿಯಲಿದ್ದು, ಬೃಹತ್​ ಮೊತ್ತ ಕಲೆ ಹಾಕುವ ಅವಕಾಶವಿದೆ. ನಂತರದ ಇನ್ನಿಂಗ್ಸ್​​ಗಳಲ್ಲಿ ಬೌಲರ್​​ಗಳ ಡಾಮಿನೇಶನ್​ ಹೆಚ್ಚಾಗುತ್ತೆ. ಹೀಗಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಅಪರೂಪಕ್ಕೊಮ್ಮೆ ಟಾಸ್​​ ಗೆಲ್ಲೋ ಕೊಹ್ಲಿಗೆ ಅದೃಷ್ಠದಲ್ಲಿ ಲಕ್​ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಈ ಪಿಚ್​​​ನಲ್ಲಿ ವೇಗಿಗಳಿಗೆ ಹೆಚ್ಚಿನ ಬೆಂಬಲ ಸಿಗುವುದಿಲ್ಲ. ಹಾಗಂತ ಸ್ಪಿನ್ನರ್​ಗಳ ಪಾಲಿಗೆ ಸ್ವರ್ಗವೀ ಏನಲ್ಲ. ಆದರೆ 3 ದಿನಗಳ ಬಳಿಕ ಸ್ಪಿನ್ನರ್​ಗಳು, ತೀಕ್ಷ್ಣವಾದ ತಿರುವುಗಳ ಮೂಲಕ ಹಿಡಿತ ಸಾಧಿಸುವ ಸಾಧ್ಯತೆಯಿದೆ. ಇನ್ನೂ ಇಲ್ಲಿ ಬಿಡುವಿಲ್ಲದೆ ಕೌಂಟಿ ಪಂದ್ಯಗಳು ನಡೆದಿದ್ದು, ಈ ಪಿಚ್​ನ ಕೂಡ ಮೇಲ್ಮೈ ಕುಂದಿದೆ ಅನ್ನೋ ವರದಿಗಳಿವೆ. ಹಾಗಾಗಿ ಭಾರತ ಗೆಲುವಿಗಾಗಿ ಯಾವೆಲ್ಲಾ ಮಾಸ್ಟರ್​ಪ್ಲಾನ್​ ರೂಪಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

 

Source: newsfirstlive.com Source link