ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದ RTI ಕಾರ್ಯಕರ್ತನ ಮೇಲೆ ಹಲ್ಲೆ

ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದ RTI ಕಾರ್ಯಕರ್ತನ ಮೇಲೆ ಹಲ್ಲೆ

ಬೆಂಗಳೂರು: ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಅರ್ಜಿ ಸಲ್ಲಿಸಿದ್ದ RTI ಕಾರ್ಯಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸರ್ಜಾಪುರದ ಸೋಂಪುರ ಬಳಿ ನಡೆದಿದೆ.

ಮಾಡ್ರನ್ ಸ್ಪೇಸ್ ಕಂಪನಿಯ ಯತೀಶ್ ಮತ್ತು ಮಂಜುನಾಥ್ ಅಕ್ರಮ ಕಟ್ಟಡ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ RTI ಕಾರ್ಯಕರ್ತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ರು. ಅರ್ಜಿ ಪರಿಶೀಲಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು, ಡ್ರೀಮ್ಸ್ ಇನ್ ಪ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ಸೋಂಪುರದ ಸರ್ವೆ ನಂ-30/1,31/1 ಮತ್ತು ಚಿಕ್ಕ ದುನ್ನಸಂದ್ರ ಸರ್ವೆ ನಂ-7/2 ಒಟ್ಟು ನಾಲ್ಕು ಎಕರೆ 37 ಗುಂಟೆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

blank

ಇದಕ್ಕೆಲ್ಲಾ ಕಾರಣ ಮರಳಿ ಎಂದು ಆರೋಪಿಸಿ ಕೆಂಡಾಮಂಡಲವಾದ ಮಾಡರ್ನ್ ಸ್ಪೆಸ್ ನ ಕೇಶವ್ , ನವೀನ್, ಜಗದೀಶ್ ಎಂಬುವವರು RTI ಕಾರ್ಯಕರ್ತ ಸೋಂಪುರ ಗೇಟ್ ಬಳಿ ಕಾರಿನಲ್ಲಿ ಬರುತ್ತಿರುವಾಗ ಅಡ್ಡಗಟ್ಟಿ ದಾಳಿ ಮಾಡಿ ಮಾರಣಾಂತಿಕ ಹಲ್ಲೆಗೈದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕುರಿ ಸಂತೆ ಎಫೆಕ್ಟ್; ಕಿಲೋಮೀಟರ್​​ಗಟ್ಟಲೆ ಟ್ರಾಫಿಕ್ ಜಾಮ್.. ಪರದಾಡಿದ ಆ್ಯಂಬುಲೆನ್ಸ್

ಮೂರು ಜನ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುತ್ತಿದ್ದಂತೆ, ಸ್ಥಳದಲ್ಲಿದ್ದ ಗಾಜಿನ ಬಾಟಲುಗಳನ್ನು ತೆಗೆದುಕೊಂಡಿ ಹೆದರಿಸಿ ತನ್ನ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮುರಳಿಗೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಕುಕ್ಕರ್​ನೊಳಗೆ ತಲೆ ಸಿಕ್ಕಿಸಿಕೊಂಡ ಮಗು.. ಸತತ 2 ಗಂಟೆ ಹರಸಾಹಸಪಟ್ಟ ವೈದ್ಯರು

Source: newsfirstlive.com Source link