ಗೋವಿಂದಪುರ ಡ್ರಗ್ಸ್​ ಕೇಸ್: ಉದ್ಯಮಿ ಭರತ್​, ವಚನ್ ಚಿನ್ನಪ್ಪ‌ನನ್ನು ವಶಕ್ಕೆ ಪಡೆದ ಪೊಲೀಸರು

ಗೋವಿಂದಪುರ ಡ್ರಗ್ಸ್​ ಕೇಸ್: ಉದ್ಯಮಿ ಭರತ್​, ವಚನ್ ಚಿನ್ನಪ್ಪ‌ನನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಹಲವು ಸೆಲಿಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಂದ ದಾಳಿ ನಡೆದಿದ್ದು ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಸೋನಿಯಾ ಅಗರ್ ವಾಲ್ ಮನೆ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಭರತ್​ನನ್ನು ಗೋವಿಂದಪುರ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ಇತ್ತ ವಚನ್ ಚಿನ್ನಪ್ಪ‌ ನನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೆಡ್ಲರ್ ಥಾಮಸ್ ನೀಡಿರೋ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು, ಬೆಳಗ್ಗೆಯಿಂದ ಭರತ್ ಮನೆಯಲ್ಲಿ ತಲಾಶ್ ನಡೆಸಿದ್ದಾರೆ. ಸದ್ಯ ಭರತ್ ಮನೆಯಲ್ಲಿ‌ ಮಾದಕ ವಸ್ತುಗಳು ಪತ್ತೆಯಾಗಿರೋ ಶಂಕೆ ವ್ಯಕ್ತವಾಗಿದ್ದು ಭರತ್ ನನ್ನ ವಶಪಡೆದಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.ಇನ್ನು ಉದ್ಯಮಿ ಭರತ್ ಗುಂಪು ಗುಂಪಾಗಿ ಸ್ನೇಹಿತರನ್ನ ಕರೆ ತಂದು, ಫ್ಲಾಟ್ ನಲ್ಲಿಯೇ ಪಾರ್ಟಿ ಮಾಡಿ, ಸ್ಥಳೀಯರಿಗೆ ಕಾಟ ಕೊಡ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

ಇನ್ನು ಡ್ರಗ್ ಪೆಡ್ಲರ್ ಥಾಮಸ್ ಸಂಪರ್ಕದಲ್ಲಿದ್ದ ಎನ್ನಲಾದ ವಚನ್ ಚಿನ್ನಪ್ಪನ ಮನೆಗೆ ಇಂದು ಬೆಳಗ್ಗೆ ದಾಳಿ ಮಾಡಿದ ಕೆಜಿ ಹಳ್ಳಿ ಪೊಲೀಸರು, ಬೆನ್ಷನ್ ಟೌನ್ ನಲ್ಲಿರುವ ಮನೆಯಲ್ಲಿ ತಲಾಶ್​ ನಡೆಸಿದ್ದು, ಮನೆಯಲ್ಲಿ 50 ಗ್ರಾಂ ನಷ್ಟು ಗಾಂಜಾ ಪತ್ತೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ದಾಳಿ ಅಂತ್ಯಗೊಂಡ ಬಳಿಕ ಪೊಲೀಸರು ವಚನ್​ನನ್ನು  ವಶಕ್ಕೆ ಪಡೆದುಕೊಂಡಿದ್ದಾರೆ.

Source: newsfirstlive.com Source link