ಅಮೆರಿಕ ಡ್ರೋಣ್ ದಾಳಿಯಲ್ಲಿ 4 ಕಂದಮ್ಮಗಳ ಸಾವು; ಇದು ನ್ಯಾಯವೇ? ಕೇಳ್ತಿದ್ದಾರೆ ಪೋಷಕರು

ಅಮೆರಿಕ ಡ್ರೋಣ್ ದಾಳಿಯಲ್ಲಿ 4 ಕಂದಮ್ಮಗಳ ಸಾವು; ಇದು ನ್ಯಾಯವೇ? ಕೇಳ್ತಿದ್ದಾರೆ ಪೋಷಕರು

ಅಫ್ಘಾನಿಸ್ತಾನದ ಕಾಬೂಲ್ ಏರ್​ಪೋರ್ಟ್​ನಲ್ಲಿ ಐಎಸ್​ಐಎಸ್​-ಕೆ ಉಗ್ರರು ದಾಳಿ ನಡೆಸಿ 160ಕ್ಕೂ ಹೆಚ್ಚು ಅಫ್ಘಾನಿಸ್ತಾನದ ಪ್ರಜೆಗಳು ಹಾಗೂ 13 ಅಮೆರಿಕ ಸೈನಿಕರ ಸಾವಿಗೆ ಕಾರಣರಾಗಿದ್ದರು. ಈ ಬೆನ್ನಲ್ಲೇ ಅಮೆರಿಕ ಸೇನೆ ಡ್ರೋನ್ ಮೂಲಕ ಐಎಸ್​ಐಎಸ್ ಉಗ್ರರ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದ್ರೆ ಈ ದಾಳಿಯಲ್ಲಿ ನಾಲ್ಕು ಕಂದಮ್ಮಗಳೂ ಸಹ ಸಾವನ್ನಪ್ಪಿವೆ.

blank

ಇದನ್ನೂ ಓದಿ: ಕಾಬೂಲ್​​ನಲ್ಲಿ ರಾಕೆಟ್ ಮೂಲಕ ಅಟ್ಯಾಕ್ & ಸ್ಫೋಟ; ಮಗು ಸೇರಿ ಇಬ್ಬರು ಸಾವು

ಅಮೆರಿಕ ಸೇನೆ ಉಗ್ರರ ವಿರುದ್ಧ ದಾಳಿ ನಡೆಸಿದ್ದೇನೋ ಸರಿ.. ಆದರೆ ಆ ಮಕ್ಕಳು ಏನು ತಪ್ಪು ಮಾಡಿದ್ದವು..? ಈ ಸಾವಿಗೆ ನ್ಯಾಯ ಒದಗಿಸುವವರಾರು ಎಂದು ಆಫ್ಘನ್ ಪ್ರಜೆಗಳು, ಮಕ್ಕಳ ಪೋಷಕರು ಪ್ರಶ್ನಿಸುತ್ತಿದ್ದಾರೆ.

blank

ಇದನ್ನೂ ಓದಿ: BIGBREAKING: ಕಾಬೂಲ್​ ಏರ್​ಪೋರ್ಟ್​ ಮೇಲೆ 5 ರಾಕೆಟ್​ಗಳಿಂದ ದಾಳಿ.. ಸಾವು-ನೋವಿನ ಆತಂಕ

ಇಂದೂ ಸಹ ಉಗ್ರರು ಕಾಬೂಲ್ ವಿಮಾನ ನಿಲ್ದಾಣದ ಮೇಲೆ 5 ರಾಕೆಟ್​ಗಳ ಮೂಲಕ ದಾಳಿ ಮಾಡಿದ್ದಾರೆ. ದಾಳಿಯ ಮುನ್ಸೂಚನೆ ಪಡೆದಿದ್ದ ಅಮೆರಿಕ ಸೇನೆ ಡಿಫೆನ್ಸ್ ಸಿಸ್ಟಮ್ ಮೂಲಕ ರಾಕೆಟ್​​ಗಳನ್ನ ಓಡಿಸಿದೆ. ಹೀಗೆ ಉಗ್ರರು ಮತ್ತು ಅಮೆರಿಕ ಸೇನೆಯ ನಡುವಿನ ದಾಳಿಯಲ್ಲಿ ಅಫ್ಘನ್ ಜನರು ತತ್ತರಿಸುವಂತಾಗಿದೆ. ಅಮಾಯಕರು ಸಾವನ್ನಪ್ಪುವಂತಾಗಿದೆ.

blank

Source: newsfirstlive.com Source link