ಕನಕಪುರದಲ್ಲೊಂದು ದುರಂತ; ವಿದ್ಯುತ್​ ತಂತಿಗೆ ಸಿಲುಕಿದ್ದ ಕರು ರಕ್ಷಿಸಲು ಹೋದ ರೈತನೂ ಸಾವು

ಕನಕಪುರದಲ್ಲೊಂದು ದುರಂತ; ವಿದ್ಯುತ್​ ತಂತಿಗೆ ಸಿಲುಕಿದ್ದ ಕರು ರಕ್ಷಿಸಲು ಹೋದ ರೈತನೂ ಸಾವು

ರಾಮನಗರ: ಜಮೀನು ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ವಿದ್ಯುತ್ ಪ್ರವಹಿಸಿ, ಕರುವನ್ನು ರಕ್ಷಣೆ ಮಾಡಲು ಹೋದ ರೈತ ಕರುವಿನೊಂದಿಗೆ ತಾನೂ ಪ್ರಾಣ ಕಳೆದುಕೊಂಡ ಘಟನೆ ಕನಕಪುರದಲ್ಲಿ ನಡೆದಿದೆ.

ಕನಕಪುರ ತಾಲೂಕಿನ ಚಾಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗೌಡಹಳ್ಳಿ ಗ್ರಾಮದ ಶಿವರಾಜು ಮೃತ ರೈತ. ಕೂಲಿ‌ ಕಾರ್ಮಿಕನಾಗಿದ್ದ ಶಿವರಾಜು, ಇತ್ತೀಚಿಗೆ, ಚಾಕನಹಳ್ಳಿ ಗ್ರಾಮದ ಕುಂಟರಾಮಣ್ಣ ಎಂಬುವರ ಜಮೀನನ್ನು ಗುತ್ತಿಗೆ ಹಿಡಿದು ಬೇಸಾಯ ಮಾಡುತ್ತಿದ್ದರು. ತಾನು ಸಾಕಿದ ಕರು, ತಂತಿ ಬೇಲಿಯನ್ನು ನೆಗೆಯಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ರಕ್ಷಣೆ ಮಾಡಲು ಹೋಗಿ, ಕರುವಿನ ಜೊತೆಗೆ ಶಿವರಾಜು ಕೂಡ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕರು ಹಾಗೂ ಶಿವರಾಜು ಸಾವನ್ನಪ್ಪಿದ್ದಾರೆ. ಸದ್ಯ, ಸ್ಥಳಕ್ಕೆ ಗ್ರಾಮಾಂತರ ಪಿಎಸ್ಐ ಹೇಮಂತ್ ಕುಮಾರ್ ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link