ಅಫ್ಘಾನ್​ನಲ್ಲಿ ತಾಲಿಬಾನ್; ಭಾರತಕ್ಕೆ ಇದೆ ಆತಂಕ ಎಂದ ಡಿಜಿಪಿ

ಅಫ್ಘಾನ್​ನಲ್ಲಿ ತಾಲಿಬಾನ್; ಭಾರತಕ್ಕೆ ಇದೆ ಆತಂಕ ಎಂದ ಡಿಜಿಪಿ

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸದ ನಡುವೆಯೇ ಭಾರತಕ್ಕೆ ಆತಂಕ ಇದೆ ಎಂದು ವರದಿ ಬಂದಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಆಘಾತಕಾರಿ ಹೇಳಿಕೆಯೊಂದನ್ನ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ನೀಡಿರೋ ಮಾಹಿತಿ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ವೈಟ್ ಕಾಲರ್ ಜಿಹಾದಿಗಳ ಸಂಖ್ಯೆ ಹೆಚ್ಚಳವಾಗಿದೆ, ಇವರು ಯುವಕರಿಗೆ ಭಯೋತ್ಪಾದನಾ ಸಂಘಟನೆಗೆ ಸೇರಲು ಪ್ರಚೋದನೆ ನೀಡುತ್ತಿದ್ದಾರೆ ಎಂದಿದ್ದಾರೆ.

ವೈಟ್ ಕಾಲರ್ ಜಿಹಾದಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವಕರಲ್ಲಿ ಆಸೆಗಳನ್ನ ಹುಟ್ಟಿಸಿ ಹಾದಿ ತಪ್ಪಿಸುತ್ತಿದ್ದಾರೆ, ಇದರಿಂದ ಯಾರು ಊಹಿಸದಷ್ಟು ನಷ್ಟ ಭಾರತಕ್ಕೆ ಮುಂದಿನ ದಿನಗಳಲ್ಲಾಗಲಿದೆ ಎಂದಿದ್ದು, ಇತ್ತೀಚಿಗೆ 5 ಜನ ವೈಟ್ ಕಾಲರ್ ಜಿಹಾದಿಗಳನ್ನ ಬಂಧಿಸಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  BIGBREAKING: ಕಾಬೂಲ್​ ಏರ್​ಪೋರ್ಟ್​ ಮೇಲೆ 5 ರಾಕೆಟ್​ಗಳಿಂದ ದಾಳಿ.. ಸಾವು-ನೋವಿನ ಆತಂಕ

Source: newsfirstlive.com Source link