‘ಸತ್ತರೆ ಉಚಿತ ಅಂತ್ಯಕ್ರಿಯೆ’ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ.. ಕ್ಷಮೆ ಕೇಳಿದ ಗೋವಿಂದ ಕಾರಜೋಳ

‘ಸತ್ತರೆ ಉಚಿತ ಅಂತ್ಯಕ್ರಿಯೆ’ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ.. ಕ್ಷಮೆ ಕೇಳಿದ ಗೋವಿಂದ ಕಾರಜೋಳ

ಬೆಳಗಾವಿ: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಯಾರಾದರೂ ಸತ್ತರೆ ಉಚಿತ ಅಂತ್ಯಕ್ರಿಯೆ ಮಾಡುವ ಬಿಜೆಪಿ ಬಗ್ಗೆ ಉಲ್ಲೇಖಿಸಿತ್ತು. ಪ್ರಣಾಳಿಕೆಯಲ್ಲಿ ಈ ಅಂಶ ಸೇರಿಸಿದ ಹಿನ್ನೆಲೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ‘ಸತ್ತರೆ ಉಚಿತವಾಗಿ ಶವ ಸಂಸ್ಕಾರ’: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು

ಇಂದು ಬೆಳಗಾವಿ ಬಿಜೆಪಿ ಪಕ್ಷದ‌ ಕಚೇರಿಯಲ್ಲಿ ಸಚಿವ ಗೋವಿಂದ ಕಾರಜೋಳ ಸುದ್ಧಿಗೋಷ್ಠಿ ನಡೆಸಿ.. ಅಚಾತುರ್ಯದಿಂದ ಪ್ರಣಾಳಿಕೆಯಲ್ಲಿ ಈ ವಿಚಾರ ಸೇರ್ಪಡೆಯಾಗಿದ್ದಕ್ಕೆ ಕ್ಷೇಮಾಪಣೆ ಕೇಳುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಸತ್ತರೆ ಉಚಿತ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಬಗ್ಗೆ ನ್ಯೂಸ್​ಫಸ್ಟ್​ ವರದಿಗೆ DKS ಮೆಚ್ಚುಗೆ

ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ವಿಚಾರ ಸೇರ್ಪಡೆ ಮಾಡಲಾಗಿತ್ತು. ಜನರ ಮನಸ್ಸಿಗೆ ಇದರಿಂದ ನೋವಾಗಿದ್ದರೆ ವಿಷಾಧಿಸುತ್ತೇವೆ. ಪ್ರಣಾಳಿಕೆಯಲ್ಲಿ ಈ ವಿಚಾರ ಕೈ ಬಿಡುವುದಾಗಿ ಭರವಸೆ ನೀಡುತ್ತೇನೆ ಎಂದಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿನ ಅವಾಂತರ ಬಗ್ಗೆ ನ್ಯೂಸ್​ಫಸ್ಟ್ ವರದಿ ಮಾಡಿತ್ತು. ಈ ವಿಚಾರದ ಬಗ್ಗೆ ಕಾಂಗ್ರೆಸ್, ಆಪ್ ಸೇರಿ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

Source: newsfirstlive.com Source link