ಕೇಂದ್ರಿಯ ಕಾರಾಗೃಹದಲ್ಲಿ ಕೃಷ್ಣ ಜನ್ಮಾಷ್ಟಮಿ.. ಖೈದಿಗಳಲ್ಲಿ ಮನೆಮಾಡಿದ ಸಂಭ್ರಮ

ಕೇಂದ್ರಿಯ ಕಾರಾಗೃಹದಲ್ಲಿ ಕೃಷ್ಣ ಜನ್ಮಾಷ್ಟಮಿ.. ಖೈದಿಗಳಲ್ಲಿ ಮನೆಮಾಡಿದ ಸಂಭ್ರಮ

ಬೆಂಗಳೂರು: ಇಂದು ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಬಹು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಚಿಕ್ಕ ಚಿಕ್ಕ ಮಕ್ಕಳು ಬಾಲ ಕೃಷ್ಣನ ವೇಷ ಹಾಕಿ ಬೆಣ್ಣೆ ತಿನ್ನುತ್ತಾ ಪೋಟೋಗಳಿಗೆ ಪೋಸ್ ನೀಡ್ತಿದ್ದಾರೆ. ಜನರು ಕೃಷ್ಣನ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದು ಭಗವಾನ್​ ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದಾರೆ. ವಿನೂತನವೆಂಬಂತೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೂಡ ಕೃಷ್ಣ ಜನ್ಮಾಷ್ಟಮಿಯನ್ನು ಬಹು ಸಡಗರದಿಂದ ಆಚಸರಿಸಲಾಗಿದೆ.

blank

ಕೇಂದ್ರಿಯ ಕಾರಾಗೃಹದಲ್ಲಿ ‘ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ’ಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕೃಷ್ಣ ಜನ್ಮಾಷ್ಟಮಿಯನ್ನು ಕಾರಾಗೃಹ ಖೈದಿಗಳು ಸಡಗರದಿಂದ ಆಚರಿಸಿದ್ದಾರೆ. ಕಾರಾಗೃಹದ ಸಜಾ ಬಂಧಿಯಾದ ಕೃಷ್ಣಪ್ಪ ಎಂಬುವವರು ಕೃಷ್ಣನ ವೇಷ ತೊಟ್ಟು ಭಗವಾನ್​ ಶ್ರೀಕೃಷ್ಣನ ಲೀಲಾವಳಿಗಳನ್ನು ತೋರಿದ್ದಾರೆ. ಸಹ ಕೈದಿಗಳು ತಬಲಾ, ಗಿಟಾರ್​ ನುಡಿಸುತ್ತಾ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದಾರೆ. ಅದರ ಕೆಲವು ಝಲಕ್​ ಇಲ್ಲಿದೆ.

blank

ಇದನ್ನು ಓದಿ: ಶಾಸಕ ರೇಣುಕಾಚಾರ್ಯ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

blank

blank

Source: newsfirstlive.com Source link