ನಿಂತಿದ್ದ ಲಾರಿಗೆ ಪೊಲೀಸ್​ ಜೀಪ್​ ಡಿಕ್ಕಿ: ಡಿಎಸ್ಪಿ ಗೆ ಗಂಭೀರ ಗಾಯ

ನಿಂತಿದ್ದ ಲಾರಿಗೆ ಪೊಲೀಸ್​ ಜೀಪ್​ ಡಿಕ್ಕಿ: ಡಿಎಸ್ಪಿ ಗೆ ಗಂಭೀರ ಗಾಯ

ಯಾದಗಿರಿ: ನಿಂತ ಲಾರಿಗೆ ಹಿಂಬದಿಯಿಂದ ಪೊಲೀಸ್​ ಜೀಪ್​ ಡಿಕ್ಕಿ ಹೊಡೆದ ಪರಿಣಾಮ ಜೀಪ್​ನಲ್ಲಿದ್ದ ಡಿಎಸ್ಪಿ ಗಂಭೀರವಾಗಿ ಗಾಯಗೊಂಡ ಘಟನೆ ಶಹಾಪುರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

blank

ಬೆಳಗಿನ ಜಾವ ಘಟನೆ ನಡೆದಿದೆ ಎನ್ನಲಾಗಿದ್ದು, ನೈಟ್ ರೌಂಡ್ಸ್ ನಲ್ಲಿದ್ದ ಸುರಪುರ ಡಿಎಸ್ಪಿ ವೆಂಕಟೇಶ ಉಗಿಬಂಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದಂತೆ ಪೊಲೀಸ್ ವಾಹನದಲ್ಲಿದ್ದ ಕಾರು ಚಾಲಕ ಹಾಗೂ ಪೊಲೀಸ್ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡ ಡಿಎಸ್ಪಿ ಯನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್​ ಲಾರಿಗೆ ಗುದ್ದಿದ ರಭಸಕ್ಕೆ ​ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

blank

 

ಇದನ್ನೂ ಓದಿ: ಸಮೋಸ, ಕಬಾಬ್ ವ್ಯಾಪಾರಿಗಳು ಕದ್ದಿದ್ದು ಬರೋಬ್ಬರಿ 10 ಲಕ್ಷ ಮೌಲ್ಯದ ಬೈಕ್ಸ್.. ನಾಲ್ವರು ಅಂದರ್

blank

Source: newsfirstlive.com Source link