ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಒತ್ತಾಯ; ಶೆಟ್ಟರ್ ಮನೆಮುಂದೆ ಶ್ರೀರಾಮ ಸೇನೆ ಪ್ರತಿಭಟನೆ

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಒತ್ತಾಯ; ಶೆಟ್ಟರ್ ಮನೆಮುಂದೆ ಶ್ರೀರಾಮ ಸೇನೆ ಪ್ರತಿಭಟನೆ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಒತ್ತಾಯಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿದೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಮನೆಯಲ್ಲಿ ಗಣೇಶ ಹಬ್ಬ, ಮೊಹರಂ ಆಚರಣೆ: ಸಾಮರಸ್ಯ ಮೆರೆವ ಕುಟುಂಬ

ಸರ್ಕಾರಕ್ಕೆ ಇಲ್ಲದ ಕೋವಿಡ್ ನಿಯಮ ಗಣೇಶನಿಗೆ ಯಾಕೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯ ರ್ಯಾಲಿಗಳಲ್ಲಿ ಕೋವಿಡ್ ನಿಯಮಗಳೇ ಇಲ್ಲ. ಆದ್ರೆ ಗಣೇಶನಿಗೆ ಮಾತ್ರ ನಿಯಮ ಪಾಲನೆ ಇದೆ. ಇಂದು ಸಿಎಂ ಜೊತೆಗಿನ ಚರ್ಚೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪಣೆಗೆ ಅವಕಾಶ ಕೊಡಬೇಕು. ಕೊಡದೇ ಹೋದಲ್ಲಿ ನಮ್ಮ ಪ್ರತಿಭಟನೆ ನಿರಂತರ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

Source: newsfirstlive.com Source link