‘ನಮ್ಮ ದೇಶದಲ್ಲಿ ಸರ್ಕಾರ ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗ್ತವೆ’ ಬಸವರಾಜ್​ ಹೊರಟ್ಟಿ

‘ನಮ್ಮ ದೇಶದಲ್ಲಿ ಸರ್ಕಾರ ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗ್ತವೆ’ ಬಸವರಾಜ್​ ಹೊರಟ್ಟಿ

ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಸರ್ಕಾರಗಳು ಬದಲಾದಂತೆ, ಶಿಕ್ಷಣ ನೀತಿಗಳು ಬದಲಾಗುತ್ತಾವೆ ಇದರಿಂದ ಶಿಕ್ಷಣಕ್ಕೆ ತೊಂದರೆ ಆಗ್ತಿದೆ. ನಾನು ಜಗತ್ತಿನಲ್ಲಿರುವ ನೂರು ದೇಶಗಳನ್ನ ಸುತ್ತಾಡಿದ್ದೆನೆ ಅಲ್ಲಿನ ಶಿಕ್ಷಣ ನೀತಿಗಳು ಒಂದೆ ಇರುತ್ತೆ ಆದರೆ ಸರ್ಕಾರಗಳು ಮಾತ್ರ ಬದಲಾಗ್ತಿರ್ತಾವೆ ಎಂದಿದ್ದಾರೆ.

ಇದನ್ನೂ ಓದಿ: ಕುಕ್ಕರ್​ನೊಳಗೆ ತಲೆ ಸಿಕ್ಕಿಸಿಕೊಂಡ ಮಗು.. ಸತತ 2 ಗಂಟೆ ಹರಸಾಹಸಪಟ್ಟ ವೈದ್ಯರು

ಈಗ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸರ್ಕಾರ ಮಾಡಿದ ಮೂರನೇ ನೀತಿ.1948ರಲ್ಲಿ ರಾಧಾಕೃಷ್ಣನ್ ವರದಿ ಕೊಟ್ರು, 1952 ರಲ್ಲಿ ರಂಗಸ್ವಾಮಿ ಮುದ್ದಿಯಾರ್ ವರದಿ ಕೊಟ್ರು,1962-64ರಲ್ಲಿ ಕೊಟಾರಿಯ ಕೊಟ್ರು. ಈಗ ಈ ವರದಿಯಲ್ಲಿ ಮೊದಲಿನ ಅಂಶಗಳೆ ರಿಪೀಟ್​ ಆಗಿವೆ.ಇನ್ನು ಈ ನೀತಿಯನ್ನ 2040 ರ ವರೆಗೆ ಇಂಪ್ಲಿಮೆಂಟ್ ಮಾಡಬೇಕು ಅಂತಾರೆ ಅಲ್ಲಿವರೆಗೂ ಯಾರು ಇರ್ತಾರೊ ಯಾರು ಇರಲ್ಲೊ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಕುರಿ ಸಂತೆ ಎಫೆಕ್ಟ್; ಕಿಲೋಮೀಟರ್​​ಗಟ್ಟಲೆ ಟ್ರಾಫಿಕ್ ಜಾಮ್.. ಪರದಾಡಿದ ಆ್ಯಂಬುಲೆನ್ಸ್

ರಾಷ್ಟ್ರೀಯ ಶಿಕ್ಷಣ ನೀತಿ ವರದಿಯನ್ನ ವಿಸ್ತೃತವಾಗಿ ಅಧ್ಯಯನ ಮಾಡಬೇಕು, ಬದಲಾವಣೆ ಮಾಡಬೇಕು, ಇದರಲ್ಲಿ ಮೂರು ವರದಿಗಳಲ್ಲ, ನಾಲ್ಕೈದು ವರದಿ ಇದಾವೆ, ಇದರಿಂದ ಗ್ರಾಮೀಣ ಶಿಕ್ಷಣಕ್ಕೆ ಉಪಯೋಗವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link