ಪೊಲೀಸ್​ ಠಾಣೆಯಲ್ಲಿ ಆರೋಪಿ ಆತ್ಮಹತ್ಯೆ..ಪಿಎಸ್​ಐ ಸೇರಿ ಐವರ ಅಮಾನತು

ಪೊಲೀಸ್​ ಠಾಣೆಯಲ್ಲಿ ಆರೋಪಿ ಆತ್ಮಹತ್ಯೆ..ಪಿಎಸ್​ಐ ಸೇರಿ ಐವರ ಅಮಾನತು

ವಿಜಯಪುರ: ಸಿಂದಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ಆರೋಪಿ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿ, ಸಿಂದಗಿ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ ಒಟ್ಟು ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ವಿಜಯಪುರ ಎಸ್ಪಿ ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಶೌಚಾಲಯದ ಒಳಗೆ ತನ್ನ ಪ್ಯಾಂಟ್​​ನ್ನೇ ಬಳಸಿ ನೇಣಿಗೆ ಶರಣಾದ ಅತ್ಯಾಚಾರದ ಆರೋಪಿ

ಪಿಎಸ್‌ಐ ಸಂಗಮೇಶ ಹೊಸಮನಿ, ಎನ್.ಬಿ.ನಾಡ್. ಗುರುರಾಜ್ ಮಾಶ್ಯಾಳ್, ಅನಂತ ಪಾಟೀಲ್, ಪಿ.ಎಲ್. ಪಟ್ಟದ್ ಅವರನ್ನು ಅಮಾನತುಗೊಳಿಸಲಾಗಿದೆ. ಆತ್ಮಹತ್ಯೆಗೆ ಅನುಕೂಲವಾಗುವಂತ ವಸ್ತುಗಳನ್ನ ಠಾಣೆಯಲ್ಲಿ ಇಟ್ಟಿದ್ದರ ಹಿನ್ನೆಲೆ, ಕರ್ತವ್ಯ ಲೋಪ ಎಸಗಿದ್ದಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮಾವಳಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಆನಂದಕುಮಾರ್ ತಿಳಿಸಿದ್ದಾರೆ. ಸದ್ಯ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ..

Source: newsfirstlive.com Source link