ಜೀನ್ಸ್ ಪ್ಯಾಂಟ್‍ಗೆ ಪೇಂಟ್ ನಂತೆ ಚಿನ್ನದ ಲೇಪನ- ಕಳ್ಳನ ಮಾಸ್ಟರ್ ಪ್ಲ್ಯಾನ್

ತಿರುವನಂತಪುರಂ: ಜೀನ್ಸ್ ಪ್ಯಾಂಟ್ ಮೇಲೆ ಪೇಂಟ್ ಅಂತೆ ಚಿನ್ನದ ಲೇಪನ ಮಾಡಿಕೊಂಡು ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ತಂತ್ರ ಇದೀಗ ಕೇರಳದಲ್ಲಿ ಬಯಲಾಗಿದೆ.  

ಕೇರಳದ ಕಣ್ಣೂರು ಏರ್​ಪೋರ್ಟ್​ನಲ್ಲಿ  ಪ್ರಯಾಣಿಕನಿಂದ 302 ಗ್ರಾಂ ಚಿನ್ನವನ್ನು ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಪ್ರಯಾಣಿಕನಿಂದ ವಶವಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಬೇಸಾಯ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್‍ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್‍ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್‌ನ್ನು ಹಚ್ಚಿಕೊಂಡಿದ್ದನು ಎಂಬುದು ತಿಳಿದು ಬಂದಿದೆ. ಜೀನ್ಸ್ ಪ್ಯಾಂಟ್‍ನ ಫೋಟೋ ಇದೀಗ ಫುಲ್ ವೈರಲ್ ಆಗಿದೆ.

ಡಬಲ್ ಲೇಯರ್ ಪ್ಯಾಂಟ್‍ನಲ್ಲಿ ಚಿನ್ನದ ಪೇಸ್ಟ್‌ನ್ನು ತೆಳುವಾಗಿ ಹಚ್ಚಲಾಗಿದೆ ಎಂದು ಏರ್ ಇಂಟಲಿಜೆನ್ಸ್ ಯೂನಿಟ್ಸ್ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಇದು 302 ಗ್ರಾಂ ಗೋಲ್ಡ್, ತೆಳುವಾದ ಪೇಸ್ಟ್ ತಯಾರಿಸಿ ಪೇಂಟ್‍ನಂತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.

Source: publictv.in Source link