ಕಾಬೂಲ್​ ಏರ್​​ಪೋರ್ಟ್​ನಲ್ಲಿ ದಟ್ಟ ಹೊಗೆ -ಮತ್ತೊಂದು ದಾಳಿ ಶಂಕೆ

ಕಾಬೂಲ್​ ಏರ್​​ಪೋರ್ಟ್​ನಲ್ಲಿ ದಟ್ಟ ಹೊಗೆ -ಮತ್ತೊಂದು ದಾಳಿ ಶಂಕೆ

ಕಾಬೂಲ್ ಏರ್​​ಪೋರ್ಟ್​​​ನಲ್ಲಿ ಇಂದು ಮಧ್ಯಾಹ್ನದ ವೇಳೆಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣದ ಮೇಲೆ ಮತ್ತೆ ರಾಕೆಟ್​ ದಾಳಿ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ವಿದೇಶಿ ಮಾಧ್ಯಮಗಳು ದಡ್ಡ ಹೊಗೆ ಕಾಣಿಸಿಕೊಂಡ ಬಗ್ಗೆ ವರದಿ ಮಾಡಿದವೆ. ಏರ್​​ಪೋರ್ಟ್​​ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದೆಯಾ ಎಂಬ ಬಗ್ಗೆ ಶಂಕೆ ಕೇಳಿ ಬಂದಿದೆ ಎಂದು ವರದಿ ಮಾಡಿದೆ. ಆದರೆ ದಡ್ಡ ಹೊಗೆ ಕಾಣಿಸಿಕೊಂಡಿದ್ದು ಏಕೆ..? ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಕಾಬೂಲ್​ ವಿಮಾನ ನಿಲ್ದಾಣದ ಬಳಿ ಇರುವ ರೆಸಿಡೆನ್ಸಿಯಲ್ ಪ್ರದೇಶದಿಂದ ಅಂತಾರಾಷ್ಟ್ರೀಯ ಏರ್​​ಪೋರ್ಟ್​ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಅಫ್ಘಾನಿಸ್ತಾನದಿಂದ ಅಮೆರಿಕಾ ಸೇರಿದಂತೆ ಎಲ್ಲಾ ದೇಶಗಳು ಹೊರ ನಡೆಯಬೇಕು ಎಂದು ತಾಲಿಬಾನ್​ ಆ.31ಕ್ಕೆ ಡೆಡ್​​ಲೈನ್​ ನೀಡಿತ್ತು. ಈ ನಡುವೆಯೇ ಕಾಬೂಲ್​ ಏರ್​​ಪೋರ್ಟ್​ ಮೇಲೆ ರಾಕೆಟ್​ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಅಮೆರಿಕಾ ಸೇನೆಯ ಯೋಧರು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ಕೂಡ ಏರ್​​ಪೋರ್ಟ್​​ ಮೇಲೆ ರಾಕೆಟ್​ ದಾಳಿ ನಡೆಸಲಾಗಿತ್ತು.

Source: newsfirstlive.com Source link