240 ಕಿಮೀ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತ- ಗಾಳಿಯ ರಭಸಕ್ಕೆ ಹಿಮ್ಮುಖವಾಗಿ ಹರಿದ ನದಿ

240 ಕಿಮೀ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತ- ಗಾಳಿಯ ರಭಸಕ್ಕೆ ಹಿಮ್ಮುಖವಾಗಿ ಹರಿದ ನದಿ

ವಾಶಿಂಗ್ಟನ್: ಭಾರೀ ಪ್ರಮಾಣದ ಚಂಡಮಾರುತ ಮೆಕ್ಸಿಕೋದ ಸೌತ್​ ನ್ಯೂ ಓರ್ಲಿಯನ್ಸ್ ಬಳಿಯ ಪ್ರದೇಶಕ್ಕೆ ಅಪ್ಪಳಿಸಿದ್ದು, ಪರಿಣಾಮ ಭೂಕುಸಿತ ಸಂಭವಿಸಿ ಮಿಸ್ಸಿಸ್ಸಿಪ್ಪಿ ನದಿಯು ಹಿಮ್ಮುಖವಾಗಿ ಹರಿದ ಘಟನೆ ಭಾನುವಾರ ನಡೆದಿದೆ.

ನದಿ ಚಂಡಮಾರುತದ ಗಾಳಿಯ ರಭಸಕ್ಕೆ ನದಿ ಹಿಮ್ಮುಖವಾಗಿ ಚಲಿಸುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ. ಹೈ-ಎಂಡ್​​ ಕ್ಯಾಟಗಿರಿಯ ಇಡಾ ಚಂಡಮಾರುತ ತೀವ್ರಗೊಂಡ ಪರಿಣಾಮ ನದಿ ತಾತ್ಕಾಲಿಕವಾಗಿ ಹಿಮ್ಮುಖವಾಗಿ ಹರಿದಿದೆ.

ಅಮೆರಿಕಾದ ಜಿಯೋಲಾಜಿಕಲ್​ ಸರ್ವೆ (ಯುಎಸ್​​​ಜಿಎಸ್​) ಅನ್ವಯ, ಸೌತ್​ಈಸ್ಟ್​​ನ ನ್ಯೂ ಓರ್ಲಿಯನ್ಸ್ ಬಳಿಯ ಬೆಲ್ಲೆ ಚಾಸೆ ಬಳಿ ನದಿ ಹಿಮ್ಮುಖವಾಗಿ ಚಲಿಸಿದೆ. ಈ ಕುರಿತ ವಿಡಿಯೊ ಹಂಚಿಕೊಂಡಿರುವ ಗ್ಲೋಬಲ್​ ರಿಪೋರ್ಟ್​​ ಹೆಸರನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಐಡಾ ಚಂಡಮಾರುತದ ರಭಸಕ್ಕೆ ಮಿಸ್ಸಿಸ್ಸಿಪ್ಪಿ ನದಿ ಹಿಮ್ಮುಖವಾಗಿ ಹರಿದ ಪರಿಣಾಮ ಸಮುದ್ರದ ಅಗಾಧ ಪ್ರಮಾಣ ನೀರು ತೀರಕ್ಕೆ ಅಪ್ಪಳಿಸಿದೆ ಎಂದು ಬರೆದುಕೊಳ್ಳಲಾಗಿದೆ.

Source: newsfirstlive.com Source link