ಅಕ್ಕೋ..ಮನೆ ಮಂದಿಯೆಲ್ಲಾ ನೋಡ್ತಾವ್ರೆ.. ಅದೇನ್ ತಿಂತೌನೆ ಬಾವ?

ಅಕ್ಕೋ..ಮನೆ ಮಂದಿಯೆಲ್ಲಾ ನೋಡ್ತಾವ್ರೆ.. ಅದೇನ್ ತಿಂತೌನೆ ಬಾವ?

ಪ್ರಿಯಾಂಕ ಚೋಪ್ರ ಜೋನಾಸ್​.. ಇಷ್ಟ್​ ದಿನ ಫುಲ್​ ಬ್ಯುಸಿಯಾಗಿದ್ದ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಸೈಲಂಟ್​ ಆಗ್ನಿಟ್ಟಿದ್ರು. ಸಿಟಾಡೆಲ್​ ಎಂಬ ಸೀರಿಸ್​ನ ಚಿತ್ರಿಕರಣದಲ್ಲಿ ಬ್ಯಸಿಯಾಗಿದ್ದ  ಪ್ರಿಯಾಂಕ, ಇದೀಗ, ಲಂಡನ್​ನಲ್ಲಿ, ತಮ್ಮ ಗಂಡ ಹಾಗೂ ಸಿಂಗರ್​ ನಿಕ್​ ಜೋನಾಸ್​ ಜೊತೆ ಟೈಂ ಸ್ಪೆಂಡ್​ ಮಾಡ್ತಾಯಿದ್ದಾರೆ.

ಹೌದೂ, ಇಷ್ಟ್​ ದಿನ ಗಂಡ ಹೆಂಡ್ತಿ ಇಬ್ಬರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಜಿಯಿದ್ದ ಕಾರಣ ಇಬ್ಬರೂ ಬೇರೆ ಬೇರೆ ದೇಶದಲ್ಲಿದ್ದರು. ಹೀಗಾಗಿ, ಒಬ್ಬರೊನ್ನಬ್ಬರು ತುಂಬಾ ಮಿಸ್​ ಮಾಡಿಕೊಂಡಿದ್ದರು. ಆದ್ರೀಗ, ಇಬ್ಬರು ಲಂಡನ್​ನಲ್ಲಿ ಟೈಂ ಸ್ಪೆಂಡ್​ ಮಾಡ್ತಾಯಿದ್ದು, ಸೋಷಿಯಲ್​ ಮೀಡಿಯಾ ತುಂಬಾ ಇಬ್ಬರ ‘‘ರೊಮ್ಯಾಂಟಿಕ್’’​ ಫೋಟೋಗಳೇ ಹರಿದಾಡ್ತಾಯಿದೆ.

ನಿಕ್​ ಜೋನಾಸ್​ ನೆಚ್ಚಿನ ‘ಸ್ನ್ಯಾಕ್​’

ಪ್ರಿಯಾಂಕ, ಇಂದು ತಮ್ಮ ಇನ್​ಸ್ಟಾಗ್ರಾಂ ಪೂರ್ತಿ ಹಾಟ್​ ಫೋಟೋಗಳನ್ನೇ ಹಾಕಿದ್ದಾರೆ ಅದ್ರಲ್ಲೂ, ತಮ್ಮ ಗಂಡನ ಜೊತೆಗಿನ ಫೋಟೋ ಎಲ್ಲೆಡೆ ಹಲ್​ಚಲ್​ ಹಬ್ಬಿಸುತ್ತಿದೆ. ಪ್ರಿಯಾಂಕ, ಸನ್​ಬಾತಿಂಗ್​ನಲ್ಲಿ ಬ್ಯುಜಿಯಾಗಿದ್ದರೆ,ನಿಕ್​ ತಮ್ಮ ನೆಚ್ಚಿನ ‘ಸ್ನ್ಯಾಕ್​’ ಅಂದ್ರೆ ಪ್ರಿಯಾಂಕ ಚೋಪ್ರಾರೊಂದಿಗೆ ಎಂಜಾಯ್​ ಮಾಡ್ತಿದ್ದಾರೆ. ಈ ಕೆಳಗಿನ ಫೋಟೋವನ್ನ ಒಮ್ಮ ನೋಡಿದ್ರೆ ನಿಮಗೆ,ನಿಕ್​ ತಮ್ಮ ಕೈಯಲ್ಲಿ ಚಾಕು, ಹಾಗೂ ಫೋರ್ಕ್​ ಹಿಡಿದುಕೊಂಡು, ತಮ್ಮ ನೆಚ್ಚಿನ ‘ಸ್ನ್ಯಾಕ್​’ನ್ನ ಚಾಕುವಿನ ಮೂಲಕ ಕಟ್ ಮಾಡ್ತಾಯಿದ್ದಾರೆ​. ಪ್ರಿಯಾಂಕ, ಈ ಸುಂದರ ಕ್ಷಣವನ್ನ ಫೋಟೋ ಮೂಲಕ ಕ್ಲಿಕ್ಕಿಸಿಕೊಂಡು ಅದನ್ನ ಶೇರ್​ ಮಾಡಿದ್ದಾರೆ. ಈ ಫೋಟೋಗೆ, 1.4ಮಿಲಿಯನ್​ ಲೈಕ್ಸ್​ ಬಂದಿದ್ದು, ಎಲ್ಲೆಡೆ ಇವ್ರಿಬ್ಬರ ಫೋಟೋಗಳೇ ಓಡಾಡ್ತಾಯಿದೆ.

ದೀದಿ ಏನಿದು ಫೋಟೋ..? 

ಇನ್ನೂ, ಪ್ರಿಯಾಂಕ ಈ ಫೋಟೋವನ್ನ ತಮ್ಮ ಇನ್​ಸ್ಟಾದಲ್ಲಿ ಹಾಕಿದಾಗ, ಕಮೆಂಟ್ಸ್​ಗಳ ಸುರಿಮಳೆ ಜೋರಾಗಿತ್ತು. ಏನ್​ ಸಖತ್ತಾಗಿದೆ ಅಂತ ಕಮೆಂಟ್​ಗಳು ಬರ್ತಿದೆ. ಆದ್ರೆ, ಪರಿಣಿತಿ ಚೋಪ್ರ ’’ಅಯ್ಯೋ ಅಕ್ಕೋ, ಏನಿದು ಫೋಟೋ..? ಫ್ಯಾಮಿಲಿಯವರೆಲ್ಲ ಇನ್​ಸ್ಟಾಗ್ರಾಂನಲ್ಲಿದ್ದಾರೆ. ಅವರೆಲ್ಲ, ಇಂಥ ಫೋಟೋನ ಕಣ್ಮುಚ್ಕೊಂಡ್​ ಲೈಕ್​ ಮಾಡ್ಬೇಕಾಗುತ್ತೆ.’’ ಅಂತ ಕಮೆಂಟ್​ ಹಾಕಿದ್ದಾರೆ. ಒಟ್ಟಿನಲ್ಲಿ, ಸಖತ್​ ಹಾಟ್​ ಕಪಲ್​ ಅಂತ ಇಬ್ಬರೂ ಈಗ ಸುದ್ದಿಯಲ್ಲಿದ್ದಾರೆ.

 

 

Source: newsfirstlive.com Source link