ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ಮೋಜು ಮಸ್ತಿ ಮಾಡುವುದನ್ನು ಎಂದಿಗೂ ಮಿಸ್ ಮಾಡಿಕೊಂಡಿಲ್ಲ. ಸದ್ಯ ಪ್ರಿಯಾಂಕಾ ಪತಿ ನಿಕ್ ಜೊತೆ ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಷ್ಟು ದಿನ ಪ್ರಿಯಾಂಕಾ ಚೋಪ್ರಾ ತಮ್ಮ ಮುಂಬರುವ ಶೋ ಸಿಟಾಡೆಲ್ ಚಿತ್ರೀಕರಣದಲ್ಲಿ ನಿರತರಾಗಿದ್ದರು. ತಿಂಗಳುಗಳ ಕಾಲ ಚಿತ್ರೀಕರಣದ ನಂತರ ಇದೀಗ ಪ್ರಿಯಾಂಕಾ ಪತಿ ನಿಕ್ ಜೋನಾಸ್ ಜೊತೆ ಲಾಸ್ ಏಂಜಲೀಸ್ ನಿವಾಸದಲ್ಲಿ ಸುಂದರ ಸಮಯ ಕಳೆಯುತ್ತಿದ್ದಾರೆ. ಅಲ್ಲದೇ ಕಡಲ ತೀರದಲ್ಲಿ ಪ್ರಿಯಾಂಕಾ ನಿಕ್ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

ಈ ಫೋಟೋದಲ್ಲಿ ಪ್ರಿಯಾಂಕಾ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ನಿಕ್ ಜೋನಸ್ ಕೈಯಲ್ಲಿ ಫೋರ್ಕ್ ಮತ್ತು ಚಾಕು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಪ್ರಿಯಾಂಕಾ ಜೋರಾಗಿ ನಗುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಹಾರ್ಟ್ ಎಮೋಜಿ ಹಾಕಿ ಸ್ನ್ಯಾಕ್ ಎಂದು ಪ್ರಿಯಾಂಕಾ ಕ್ಯಾಪ್ಷನ್‍ನಲ್ಲಿ ಬರೆದಿದುಕೊಂಡಿದ್ದಾರೆ.

ಸದ್ಯ ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಫೋಟೋದಲ್ಲಿ ಪ್ರಿಯಾಂಕಾ ಕಪ್ಪು ಮತ್ತು ಕೆಂಪು ಬಣ್ಣದ ಬಿಕಿನಿ ತೊಟ್ಟು ಮಲಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

Source: publictv.in Source link