ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ನಟ, ನಿರ್ದೇಶಕ ರಿಷಬ್ ಶೆಟ್ಟಿ..

ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ನಟ, ನಿರ್ದೇಶಕ ರಿಷಬ್ ಶೆಟ್ಟಿ..

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಅಭಿಯಾನದಲ್ಲಿ ಸ್ಯಾಂಡಲ್​ವುಡ್​ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪಾಲ್ಗೊಂಡು ಬೇಸಾಯ ಮಾಡಿದ್ದಾರೆ.

blank

ಮೂಡುತೋನ್ಸೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಿಷಬ್ ಶೆಟ್ಟಿ ಭತ್ತದ ಗದ್ದೆಯಲ್ಲಿ ಕಳೆಯನ್ನ ಕಿತ್ತು ಕೃಷಿ ಚಟುವಟಿಕೆ ಮಾಡಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ 1,500 ಎಕರೆ ಹಡಿಲು ಭೂಮಿ ಕೃಷಿಯನ್ನ ಮಾಡಲಾಗಿದೆ. ಈ ಗದ್ದೆಗಳಲ್ಲಿ ಪೈರಿನ ನಡುವೆ ಕಳೆ ಗಿಡಗಳು ಬೆಳೆದಿರುವುದರಿಂದ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್ ಕುಮಾರ್, ಶಾಸಕ ರಘುಪತಿ ಭಟ್, ವಿದ್ಯಾರ್ಥಿಗಳು, ಸ್ಥಳೀಯರು ಭಾಗಿಯಾಗಿ ಕೃಷಿ ಚಟುವಟಿಕೆ ಮಾಡಿದ್ದಾರೆ.

ಇದನ್ನೂ ಓದಿ: ಉಳಿದವರು ಕಂಡಂತೆ ನಾನಲ್ಲ, ನಟನೆಗೂ ಸೈ, ಕೃಷಿಗೂ ಜೈ ಎಂದ ರಕ್ಷಿತ್ ಶೆಟ್ಟಿ

ಇದನ್ನೂ ಓದಿ: ತಲೆಗೆ ಹಾಳೆ ಟೋಪಿ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿ ಮತ್ತೆ ಗದ್ದೆಗೆ ಇಳಿದ ಕೇಂದ್ರ ಸಚಿವೆ

blank

Source: newsfirstlive.com Source link