ತಾಲಿಬಾನ್​​​​ ವಶಕ್ಕೆ ಪಡೆದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ವಾಪಸ್​ ಆದ ಒಸಾಮಾ ಬಿನ್​ ಲಾಡೆನ್​ ಆಪ್ತ

ತಾಲಿಬಾನ್​​​​ ವಶಕ್ಕೆ ಪಡೆದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ವಾಪಸ್​ ಆದ ಒಸಾಮಾ ಬಿನ್​ ಲಾಡೆನ್​ ಆಪ್ತ

ಪ್ರಮುಖ ಅಲ್​​​-ಖೈದಾ ನಾಯಕ, ಒಸಾಮಾ ಬಿನ್​ ಲಾಡೆನ್ ಆಪ್ತನಾಗಿದ್ದ ಅಮಿನ್ ಉಲ್ ಹಕ್ ಅಫ್ಘಾನಿಸ್ತಾನಕ್ಕೆ ವಾಪಸ್​ ಆಗಿದ್ದಾನೆ. ತಾಲಿಬಾನಿಗಳು ಅಮಿನ್ ಉಲ್ ಹಕ್​​​ನ ತವರು ಪ್ರದೇಶವಾಗಿರುವ ನಂಗರ್ಹಾರ್​​​ನ್ನು ವಶಕ್ಕೆ ಪಡೆದ ಬಳಿಕ ಆತ ವಾಪಸ್​ ಆಗಿದ್ದಾನೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

2011ರಲ್ಲಿ ಅಮೆರಿಕಾ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದ ಒಸಾಮಾ ಬಿನ್​​ ಲಾಡೆನ್​ ಆಪ್ತನಾಗಿರುವ ಅಮಿನ್​ ಉಲ್​​ ಹಕ್​​, ಆ ಬಳಿಕ ಪಾಕಿಸ್ತಾನಕ್ಕೆ ಫಲಾಯಾನ ಮಾಡಿದ್ದ. ಒಸಾಮಾರ ಭದ್ರತಾ ಉಸ್ತುವಾರಿ ಆಗಿದ್ದ ಉಲ್​​​ ಹಕ್​​, 80ರ ದಶಕದಲ್ಲಿ ಲಾಡೆನ್​​ ಜೊತೆ ಸೇರಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಅಫ್ಘಾನ್ ನೆಲದಲ್ಲಿ ಅಲ್ ಖೈದಾ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಅವಕಾಶ ನೀಡೋದಿಲ್ಲ ಅಂತಾ ತಾಲಿಬಾನ್ ಭರವಸೆ ನೀಡಿದ್ದ ಹೊರತಾಗಿಯೂ ಉಲ್​ ಹಕ್​ ಅಫ್ಘಾನಿಸ್ತಾನಕ್ಕೆ ವಾಪಸ್​ ಆಗಿದ್ದಾನೆ.

ಅಮಿನ್ ಉಲ್ ಹಕ್ ತವರು ಪ್ರದೇಶಕ್ಕೆ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ತಾಲಿಬಾನಿಗಳು ಅಮಿನ್ ಉಲ್ ಹಕ್​ಗೆ ಸ್ವಾಗತ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರೊಂದಿಗೆ ಮತ್ತೊಮ್ಮೆ ಅಫ್ಘಾನಿಸ್ತಾನ ಭಯೋತ್ಪಾದಕರ ಸ್ವರ್ಗ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೇ, ದೋಹ ಒಪ್ಪಂದದ ಅನ್ವಯ, ಅಫ್ಘಾನಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಗೆ ತನ್ನ ನೆಲದಲ್ಲಿ ಅವಕಾಶ ನೀಡೋದಿಲ್ಲ ಅಂತಾ ಅಮೆರಿಕಗೆ ಭರವಸೆ ನೀಡಿತ್ತು. ಬರೋಬ್ಬರಿ 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಅಧಿಕಾರ ಪಡೆದುಕೊಂಡಿದ್ದ ತಾಲಿಬಾನ್​​, ಆಗಸ್ಟ್​ 15ರ ವೇಳೆಗೆ ಇಡೀ ಅಫ್ಘಾನ್​​​ನನ್ನು ವಶಕ್ಕೆ ಪಡೆದುಕೊಂಡು ಯುದ್ಧಕ್ಕೆ ವಿರಾಮ ಘೋಷಣೆ ಮಾಡಿತ್ತು.

Source: newsfirstlive.com Source link