ಸೆ.9ಕ್ಕೆ ಅಭಿಮಾನಿಗಳಿಗೆ ‘ಟಾರ್ಚರ್’ ಕೊಡ್ತಾರಂತೆ ರಕ್ಷಿತ್​ ಶೆಟ್ಟಿ

ಸೆ.9ಕ್ಕೆ ಅಭಿಮಾನಿಗಳಿಗೆ ‘ಟಾರ್ಚರ್’ ಕೊಡ್ತಾರಂತೆ ರಕ್ಷಿತ್​ ಶೆಟ್ಟಿ

‘#777 ಚಾರ್ಲಿ’ ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈಗಾಗಲೆ ಚಿತ್ರದ ಪೋಸ್ಟರ್​ ಮತ್ತು ಟೀಸರ್​ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರೋ ‘#777 ಚಾರ್ಲಿ’ ಚಿತ್ರದ ಮೊದಲ ವಿಡಿಯೋ ಹಾಡು ಬಿಡುಗಡೆಗೆ ಸಜ್ಜಾಗಿದೆ.

ಹೌದು, ಮುಂದಿನ ತಿಂಗಳು ಸೆಪ್ಟೆಂಬರ್​ 9 ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ‘#777 ಚಾರ್ಲಿ’ ಚಿತ್ರದ ಟಾರ್ಚರ್​ ಹಾಡು ರಿಲೀಸ್​ ಆಗಲಿದೆ. ಇನ್ನು ಈ ಬಗ್ಗೆ ಚಿತ್ರತಂಡ ಫನಿ ಪೋಸ್ಟರ್​ ಒಂದನ್ನ ಬಿಟ್ಟಿದು ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ನಿರ್ದೇಶಕ ಕಿರಣ್​ರಾಜ್​. ಕೆ ಕಲ್ಪನೆಯಲ್ಲಿ ‘#777 ಚಾರ್ಲಿ’ ಸಿನಿಮಾ ಮೂಡಿ ಬರುತ್ತಿದ್ದು, ನಟ ರಕ್ಷಿತ್​ ಶೆಟ್ಟಿ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ‘#777 ಚಾರ್ಲಿ’ ಸಿನಿಮಾ ತೆರೆ ಮೇಲೆ ಬರೋ ಸಾಧ್ಯತೆಗಳಿವೆ. ಸದ್ಯ ರಕ್ಷಿತ್​ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸೆಕೆಂಡ್​ ಆಫ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

Source: newsfirstlive.com Source link