ಭಾರತಕ್ಕೆ ಮತ್ತೊಂದು ಪದಕ; ಜಾವೆಲಿನ್​​​ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್​ ಅಂತಿಲ್​​

ಭಾರತಕ್ಕೆ ಮತ್ತೊಂದು ಪದಕ; ಜಾವೆಲಿನ್​​​ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್​ ಅಂತಿಲ್​​

ಟೋಕ್ಯೋ ಪ್ಯಾರಲಿಂಪಿಕ್ಸ್​ನಲ್ಲಿ ಪುರುಷ ಜಾವೆಲಿನ್​​ ಥ್ರೋ ವಿಭಾಗದಲ್ಲಿ ಅಥ್ಲೀಟ್​​ ಸುಮಿತ್​ ಅಂತಿಲ್​​ ಚಿನ್ನದ ಪದಕ ಗೆದ್ದಿದ್ದಾರೆ. ಈ ಮುನ್ನ ಶೂಟಿಂಗ್​ನಲ್ಲಿ 19 ವರ್ಷದ ಅವನಿ ಲೇಖರ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಳಿಕ ಡಿಸ್ಕರ್​ ಥ್ರೋನಲ್ಲಿ ಯೋಗಿಶ್​ ಬೆಳ್ಳಿ ಗೆದ್ದ ಸಾಧನೆ ಮಾಡಿದರು. ಈ ಬೆನ್ನಲ್ಲೀಗ ಜಾವಲೀನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ.

ಈ ಮುನ್ನ ಜಾವಲೀನ್ ಥ್ರೋ ಪುರುಷರ ವಿಭಾಗದ ಎಫ್​46 ಫೈನಲ್​ನಲ್ಲಿ ದೇವೇಂದ್ರ ಬೆಳ್ಳಿ ಪದಕಕ್ಕೆ ಮುತ್ತಿಟ್ಟರೆ, ಸುಂದರ್ ಗುರ್ಜರ್ ಸಿಂಗ್ ಕಂಚಿನ ಪದಕಕ್ಕೆ ಗೆಲ್ಲುವಲ್ಲಿ ಯಶಸ್ವಿಯಾದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್​ ಸುತ್ತಿನಲ್ಲಿ ಲಂಕಾದ ದಿನೇಶ್​ ಪ್ರಿಯನ್, ದೇವೆಂದ್ರ, ಸುಂದರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಇದನ್ನೂ ಓದಿ: ಮುಂದುವರೆದ ಭಾರತದ ಪದಕದ ಬೇಟೆ; ಜಾವೆಲಿನ್ ಥ್ರೋನಲ್ಲಿ ಬೆಳ್ಳಿ, ಕಂಚು ಗೆದ್ದ ಕ್ರೀಡಾಪಟುಗಳು

Source: newsfirstlive.com Source link