‘ಪ್ರತಿಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವ ಯುವ ನಾಯಕ ಬಿ.ವೈ.ವಿಜಯೇಂದ್ರ’ -BSY ಪುತ್ರನನ್ನು ಹಾಡಿ ಹೊಗಳಿದ ಅರುಣ್ ಸಿಂಗ್

‘ಪ್ರತಿಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವ ಯುವ ನಾಯಕ ಬಿ.ವೈ.ವಿಜಯೇಂದ್ರ’ -BSY ಪುತ್ರನನ್ನು ಹಾಡಿ ಹೊಗಳಿದ ಅರುಣ್ ಸಿಂಗ್

ದೆಹಲಿ: ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವ ಯುವ ನಾಯಕ ಬಿ.ವೈ ವಿಜಯೇಂದ್ರ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೊಗಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅರುಣ್​​ ಸಿಂಗ್​​, ಬಿ.ವೈ ವಿಜಯೇಂದ್ರ ಚಾಣಕ್ಷತನ ಹೊಂದಿರುವ ಯುವ ನಾಯಕ. ನನಗೆ ವೈಯಕ್ತಿಕವಾಗಿ ವಿಜಯೇಂದ್ರ ಕೆಲಸ ಬಗ್ಗೆ ಗೊತ್ತಿದೆ ಎಂದರು.

ಬಿ.ವೈ ವಿಜಯೇಂದ್ರ ಸದ್ಯ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಇವರನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರ ಪಕ್ಷ ತೆಗೆದುಕೊಳ್ಳಲಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಲಕ್ಷಾಂತರ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಇಂತವರ ನಡುವೆ ಹಲವರಿಗೆ ಅಧಿಕಾರ ಸಿಕ್ಕಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಲಿ ಎಂದು ಅಸಮಾಧಾನಿತರಿಗೆ ಟಾಂಗ್ ಕೊಟ್ಟರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಪುಟ ಸೇರಲು ಹೈಕಮಾಂಡ್​​​ ಅವರನ್ನಾಗಲೀ ನನ್ನಾಗಲೀ ಭೇಟಿ ಮಾಡಿಲ್ಲ. ಸರಿಯಾದ ಸಮಯದಲ್ಲಿ ಈ ವಿಚಾರದ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ಪ್ರವಾಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅತೀ ಹೆಚ್ಚು ಸ್ಥಾನಗಳು ಗಳಿಸಲು ಈ ಪ್ರವಾಸ ಸಹಕಾರಿಯಾಗಲಿದೆ.

ಇದನ್ನೂ ಓದಿ: ‘ಸತ್ತರೆ ಉಚಿತ ಅಂತ್ಯಕ್ರಿಯೆ’ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ.. ಕ್ಷಮೆ ಕೇಳಿದ ಗೋವಿಂದ ಕಾರಜೋಳ

ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಭರ್ತಿಯ ಸಂದರ್ಭದಲ್ಲಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇರಲಿದೆ. ಕರ್ನಾಟಕದ ಬಿಜೆಪಿಯಲ್ಲಿ ಅತೀ ಹಿರಿಯ ಮತ್ತು ಪ್ರಶ್ನಾತೀತ ನಾಯಕ ಬಿ.ಎಸ್​ ಯಡಿಯೂರಪ್ಪ ಎಂದರು.

Source: newsfirstlive.com Source link