ನೋಡೋಕಿದು ಹಳದಿ ಬಣ್ಣದ ಪೈಂಟಿಗ್​ ತರ ಕಾಣಬಹುದು, ಆದ್ರೆ ಇದು ಪೈಂಟ್​ ಅಲ್ಲ ‘ಗೋಲ್ಡ್​’

ನೋಡೋಕಿದು ಹಳದಿ ಬಣ್ಣದ ಪೈಂಟಿಗ್​ ತರ ಕಾಣಬಹುದು, ಆದ್ರೆ ಇದು ಪೈಂಟ್​ ಅಲ್ಲ ‘ಗೋಲ್ಡ್​’

ಕೇರಳ: ಚಿನ್ನ ಅಂತ ಅಂದ ತಕ್ಷಣ ಎಲ್ಲಾರೂ ಒಂದ್ಸಲ ಯೋಚ್ನೆ ಮಾಡ್ತಾರೆ, ಇನ್ವೆಸ್ಟ್​ಮೆಂಟು.. ಚಿನ್ನ ಮಾಡಿ ಇಟ್ಕೊಂಡ್ರೆ ಮುಂದೆ ನಮಗೆ ಯೂಸ್​ ಆಗುತ್ತೆ ಅಂತ ಒಂದಷ್ಟು ಚಿನ್ನವನ್ನ ನಾವು ಮಾಡಿಸಿ ಇಟ್ಕೊಂಡಿರ್ತೀವಿ. ಆದ್ರೆ, ಎಂಥ ಕಾಲ ಬಂತಪ್ಪ ಅಂದ್ರೆ, ಚಿನ್ನವನ್ನ ಪೇಂಟ್ ತರ ಬಳೆದುಕೊಂಡು ಕಳ್ಳ ಸಾಗಾಣೆ ಮಾಡಲು ಚಾಣಾಕ್ಷ್ಯತನವನ್ನ ಮೆರೆಯಲು ಹೋಗಿ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

ಕೇರಳದ ಕಣ್ಣೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕನಿಂದ 302 ಗ್ರಾಂ.. ಅಂದ್ರೆ ಬರೋಬ್ಬರಿ 14 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನವನ್ನು ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಚಿನ್ನವನ್ನ ವಶವಡಿಸಿಕೊಂಡಿದ್ದಾರೆ.

ನೋಡಲು ಹಳದಿ ಬಣ್ಣದ ಪೇಂಟ್​​​​ನಂತೆ ಕಾಣುವ ವಸ್ತು. ಆದ್ರೆ ಅದು ಪೈಂಟ್​ ಅಲ್ಲ, ಬದಲಾಗಿ ಚಿನ್ನ. ಇದೀಗ, ಜೀನ್ಸ್ ಪ್ಯಾಂಟ್​ನ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಜೀನ್ಸ್ ಪ್ಯಾಂಟ್​ ಎರಡನೇ ಲೇಯರ್​ನಲ್ಲಿ ಹಳದಿ ಬಣ್ಣದಲ್ಲಿ ಚಿನ್ನದ ಪೇಸ್ಟ್ಅನ್ನು ಅಡಗಿಸಿಟ್ಟು, ಕಳ್ಳಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ.

Source: newsfirstlive.com Source link