ದೂರಾಗ್ತಾರಾ ಸಮಂತಾ- ನಾಗಚೈತನ್ಯ ಜೋಡಿ? ಡಿವೋರ್ಸ್ ಬಗ್ಗೆ ಸಮಂತಾ ಹೇಳೋದೇನು?

ದೂರಾಗ್ತಾರಾ ಸಮಂತಾ- ನಾಗಚೈತನ್ಯ ಜೋಡಿ? ಡಿವೋರ್ಸ್ ಬಗ್ಗೆ ಸಮಂತಾ ಹೇಳೋದೇನು?

ಊರ ಕಣ್ಣು.. ಯಾರ ಕಣ್ಣು.. ಮಾರಿ ಕಣ್ಣು.. ಹೋರಿ ಕಣ್ಣು.. ಯಾವ ಮಸಣಿ ಕಣ್ಣು ಬಿತ್ತಮ್ಮ ನಮ್ಮ ಸಮಂತಾ-ನಾಗಚೈತನ್ಯ ಜೋಡಿಗೆ ಗೊತ್ತಿಲ್ಲ. ಯಾವುದೇ ಕಾರಣ ಹಂಗ್ ಆಗಬಾರದು ನಾಗ-ಸಮಂತಾ ಜೋಡಿ ದೂರಾಗಬಾರದು ಅಂತಿದ್ದಾರೆ ಅಕ್ಕಿನೇನಿ ಫ್ಯಾನ್ಸ್​​.. ಸಮಂತಾ ಅಕ್ಕಿನೇನಿ ಫ್ಯಾಮಿಲಿಯಿಂದ ಬೇರೆ ಆಗ್ತಾರಾ..? ನಾಗ ಚೈತನ್ಯ ಬಾಳಿಗೆ ಸಮಂತಾ ಗುಡ್ ಬೈ ಹೇಳ್ತಾರಾ..? ಇಂತಹ ಹತ್ತು ಹಲವು ಅಚ್ಚರಿಯ ಕೊಶ್ಚನ್​ ಮಾರ್ಕ್ಸ್​ ಗಳು ಸೌಥ್ನಿಂದ ನಾರ್ಥ್​​ ಗುಲ್ಲೋ ಗುಲ್ಲಾಗಿದೆ.

blank

ಟಾಲಿವುಡ್​​ನ ರೀಲ್ ಕಮ್ ರಿಯಲ್ ಜೋಡಿಗಳಲ್ಲಿ ಕಲರ್​ ಜೋಡಿ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು.. ಜೊತೆ ಜೊತೆಯಾಗಿಯೇ ಸಿನಿಮಾ ರಂಗ ಬಂದು ಬೆಳೆದು ಪ್ರೀತಿಯ ಲೋಕಕ್ಕೆ ಇಳಿದು ಮದುವೆಯ ಮೂರಕ್ಷರ ಗಂಟಿನಲ್ಲಿ ಪ್ರೇಮ ಬಂಧನವಾದವರು. ಸಂಬಂಧಗಳು ಗಾಜಿದಂಗೆ ಚೂರ ಯಾಮಾರಿದ್ರು ಟಳನೇ ಒಡೆದು ಹೋಗುತ್ತೆ.. ತೆರೆಯ ಮೇಲೆ ನಗುವಿನ ಮೂಲಕವೇ ಬೆಳದಿಂಗಳನ್ನ ಹರಿಸೋ ಅಂದದ ಆ್ಯಪಲ್ ಬ್ಯೂಟಿ ಸಮಂತಾ ಅಕ್ಕಿನೇನಿ ವಿಚಾರದಲ್ಲಿ ಹೀಗೊಂದು ಡೌಟ್ ಕಾಡಲಾರಂಭಿಸಿದೆ.. ನಾಗ ಚೈತನ್ಯ – ಸಮಂತಾ ಜೋಡಿ ದೂರಾ ದೂರಾ ಎರಡು ತೀರ ಎಂದು ಹಾಡುತ್ತಿದ್ದಾರ ಅನ್ನೊ ಡೌಟ್ ಅಭಿಮಾನಿಗಳಲ್ಲಿ ಮಾರ್ಧನಿಸುತ್ತಿದೆ.

blank

ಫ್ಯಾಮಿಲಿ ಮ್ಯಾನ್ 2 ಸೀರಿಸ್ ನಲ್ಲಿ ರಾಜಿಯಾಗಿ ನೋಡಗರಿಗೆ ಅಚ್ಚರಿಯ ಮನೋರಂಜನೆ ಕೊಟ್ಟ ಸಮಂತಾ ಖ್ಯಾತಿ ಮತ್ತು ಅಭಿಮಾನಿಗಳ ಪ್ರೀತಿ ಬಾಲಿವುಡ್ ಲೋಕದ ತನಕ ಹಬ್ಬಿತು. ಹೈದ್ರಾಬಾದ್ ಬಿಟ್ಟು ಮುಂಬೈ ಸೇರ್ತಾರೆ ಸಮಂತಾ ಅನ್ನೋ ಸುದ್ದಿ ಹರಿದಾಡ್ವಿದ್ವು. ಆದ್ರೆ ಅದ್ಯಾವಾಗ ತನ್ನ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅಕ್ಕಿನೇನಿ ಹೆಸರನ್ನ ಕಟ್ ಮಾಡಿ ‘S​’ ಅಂತ ಹಾಕಿದ್ರೋ ನೋಡಿ ಅಲ್ಲಿಗೆ ದೊಡ್ಡ ಕ್ಯೂರಿಯಾಸಿಟಿ ಪ್ಲಸ್ ಅಂತೆ ಕಂತೆಗಳು ಗಾಸಿಪ್ ಮೆಗಾಸಿಟಿಯೇ ಸೃಷ್ಟಿಯಾಗಿ ಬಿಡ್ತು.

ಸಮಂತಾ ಅಕ್ಕಿನೇನಿ ತನ್ನ ಹೆಸರನ್ನ ‘S’​​ ಎಂದು ಬದಲಾಯಿಸಲು ಕಾರಣ ಫ್ಯಾಮಿಲಿ ವಿರಸ. ಅಕ್ಕಿನೇನಿ ಫ್ಯಾಮಿಲಿ ಜೊತೆ ತನ್ನ ಗಂಡ ನಾಗ ಚೈತನ್ಯ ಜೊತೆ ಸಮಂತಾ ಜಗಳ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್​ನ ಕೆಲ ಸೀನ್​ಗಳ ಅಕ್ಕಿನೇನಿ ಫ್ಯಾಮಿಲಿಗೆ ಮುಜುಗರ ಉಂಟು ಮಾಡಿದೆ ಅದಕ್ಕೆ ಹೀಗೆಲ್ಲ ಆಗುತ್ತಿದೆ ಅಂತೆಲ್ಲ ಗಾಸಿಪ್ ಗಾಳಿಪಟ ಹಾರಾಡುತ್ತಿದೆ.

blank

ಕಳೆದ ಜೂನ್ ತಿಂಗಳ ಇನ್ಸ್​ಸ್ಟಾ ಖಾತೆಯನ್ನ ಎಸ್​​ ಎಂದು ಮರು ನಾಮಕರಣ ಮಾಡಿದ್ರು ಸ್ಯಾಮ್​​. ಈಗ ಸಮಂತಾ ಅಕ್ಕಿನೇನಿ ಎಂಬೋ ಅಸಲಿ ಅಫೀಶಿಯಲ್ ಟ್ವಿಟ್ಟರ್ ಖಾತೆಯ ಹೆಸರನ್ನು ‘s’​ ಎಂದು ರೀ ನೇಮ್ ಮಾಡಿ ಅಭಿಮಾನಿಗಳ ಕುತೂಹಲದ ಕೋಟೆಗೆ ಕಿಚ್ಚನ್ನ ಹತ್ತಿಸಿದ್ದಾರೆ. ಈಗ ಉತ್ತರದಿಂದ್ ದಕ್ಷಿಣದವರೆ ಒಂದೇ ಮಾತು ಕೇಳಿ ಬರ್ತಿರೋದು ಸಮಂತಾ ತನ್ನ ಗಂಡ ನಾಗ ಚೈತನ್ಯಗೆ ಡಿವೋರ್ಸ್ ಕೊಡ್ತಾರಾ ಅಂತ.?

ನಾಗಚೈತನ್ಯ ಜೊತೆ ಜೊತೆಗೆ ಸಿನಿಮಾ ಕರಿಯರ್​​​​ ಶುರು ಮಾಡಿದ್ರು ನಟ ಸಿದ್ಧಾರ್ಥ್ ಜೊತೆ ಲವ್ ನಲ್ಲಿದ್ರು ಸಮಂತಾ. ಸಿದ್ಧಾರ್ಥ್ ಕೊಟ್ಟ ಉಂಗುರವನ್ನ ಊರು ತುಂಬ ಹಾಕೊಂಡು ತೀರ್ಗಾಡಿದ್ರು ಸ್ಯಾಮ್ಸ್​​.. ಸಿದ್ಧಾರ್ಥ್ ಜೊತೆ ಚಾಳಿ ಟೂ ಬಿಟ್ಟ ಮೇಲೆ ನಾಗ ಚೈತನ್ಯಗೆ ಹತ್ತಿರವಾಗಿ 2018ರಲ್ಲಿ ಸಪ್ತಪದಿ ತುಳಿಸಿದ್ರು ಸ್ಯಾಮ್ಸ್​​. ಮದುವೆಯ ನಂತರವೂ ಸಾಲು ಸಾಲು ಸಿನಿಮಾಗಳ ಅವಕಾಶ ಬಂದ್ರು ನೋ ನೋ ಸದ್ಯಕ್ಕೆ ನನ್ ಕಾಲ್ ಶೀಟ್ ನನ್ನ ಗಂಡನಿಗೆ ಮಾತ್ರ ಅಂದಿದ್ರು. ಆದ್ರೆ ಈಗ ಸ್ಯಾಮ್ಸ್ ಮತ್ತು ಜ್ಯಾಮ್ಸ್ ನಡುವೆ ವಿರಹದ ಅಂತರ ಏರ್ಪಟಿದೆ ಅಂತೆ.

blank

ಇದೇನ್ ಮೇಡಂ..? ಯಾಕೆ ಸೋಶಿಯಲ್ ಮಿಡಿಯಾದಲ್ಲಿ ಅಕ್ಕಿನೇನಿ ಹೆಸರನ್ನ ಅಳಿಸಿ ಹಾಕಿದ್ದೀರಾ..? ಹೊರಗಡೆ ಜನ ನಿಮ್ಗು ನಿಮ್ಮ ಫ್ಯಾಮಿಲಿಗೂ ಅಷ್ಟಕಷ್ಟೆ ಅಂತ ಮಾತನಾಡ್ತಿದ್ದಾರೆ ಹೌದೇನು ಎಂದು ಪ್ರಶ್ನೆಗಳು ಕೇಳಿದಾಗ.. ಸ್ಯಾಮ್ಸ್ ‘ಸದ್ಯಕ್ಕಂತು ಗಾಸಿಪ್ ಪ್ರಶ್ನೆಗಳಿಗೆ ಉತ್ತರ ಹೇಳೋ ಟೈಮ್ ಇದಲ್ಲ’.. ‘ನನ್ನ ಹೆಸರು ಬದಲಾವಣೆ ಮಾಡಿಕೊಂಡಿದ್ಯಾಕೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಉತ್ತರ ನೀಡೋ ಟೈಮ್ ಬರುತ್ತೆ’ ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ ಸಮಂತಾ- ನಾಗಚೈತನ್ಯ ಜೋಡಿಯ ವಿರಸದ ವಿಚಾರ ಊರ್ ತುಂಬ ಹಬ್ಬಿರೋದಂತು ನಿಜ.. ಮನಂ ಜೋಡಿ ಯಾವುದೇ ಕಾರಣಕ್ಕೂ ದೂರಗ ಬಾರದು , ಇಬ್ಬರು ಒಟ್ಟಿಗೆ ನಗು ನಗುತ್ತಾ ಸಂಸಾರ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ.. ಅದ್ರೆ ಈ ಅಭಿಮಾನಿಗಳ ಆಸೆಗೆ ಸಮಂತಾ-ನಾಗಚೈತನ್ಯ ಜೋಡಿ ಏನ್ ಮಾಡುತ್ತೆ ಕಾದು ನೋಡೋಣ.

Source: newsfirstlive.com Source link