ಸೆ.6 ರಿಂದ 6, 7 ಮತ್ತು 8ನೇ ತರಗತಿ ಶಾಲೆ ಆರಂಭ -ಸಚಿವ ಆರ್.ಅಶೋಕ್​

ಸೆ.6 ರಿಂದ 6, 7 ಮತ್ತು 8ನೇ ತರಗತಿ ಶಾಲೆ ಆರಂಭ -ಸಚಿವ ಆರ್.ಅಶೋಕ್​

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ 6, 7 ಮತ್ತು 8ನೇ ತರಗತಿ ವರೆಗೂ ಶಾಲೆ ಆರಂಭ ಮಾಡಲು ನಿರ್ಧಾರ ಮಾಡಲಾಗಿದೆ. ಸೆ.6ರಿಂದ ಶಾಲೆ ಆರಂಭ ಆಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅಶೋಕ್​ ಅವರು, ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ ನಿಯಮಗಳು ಏನಿರಬೇಕು? ಎಂಬುದರ ಬಗ್ಗೆ ಚರ್ಚೆ ಆಗಿದೆ. ಕೇರಳದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕ್ವಾರೆಂಟೈನ್ ಮಾಡಬೇಕು. ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಒಂದು ವಾರದ ಬಳಿಕ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ವಿವರಿಸಿದರು.

Source: newsfirstlive.com Source link