ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸುವವರು ಅವಿವೇಕಿಗಳು: ಹುಲ್ಲೂರು ಕುಮಾರಸ್ವಾಮಿ

ಚಿತ್ರದುರ್ಗ: ಸದಾಶಿವ ಆಯೋಗದ ವರದಿ ಜಾರಿಯಾಗುವುದನ್ನು ವಿರೋಧಿಸುವವರು ಅವಿವೇಕಿಗಳು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜನಾಶೀರ್ವಾದ ಯಾತ್ರೆ ವೇಳೆ ಹೊತ್ತಿಕೊಂಡಿದ್ದ ಮೀಸಲಾತಿಯ ಬೆಂಕಿ ಇದೀಗ ಚಿತ್ರದುರ್ಗದಲ್ಲಿ ಭೋವಿ ಹಾಗೂ ಮಾದಿಗ ಸಮುದಾಯಗಳ ನಡುವೆ ವಾಕ್ಸಮರಕ್ಕೆ ದಾರಿಯಾಗಿದೆ. ಹೀಗಾಗಿ ಇಂದು ಚಿತ್ರದುರ್ಗದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸುವ ಬೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಸಚಿವ ಪ್ರಭು ಚೌಹಣ್ ಅವರಿಗೆ ತಾಕತ್ತಿದ್ದರೆ ಸದಾಶಿವ ಆಯೋಗದ ವರದಿಯನ್ನು ಸರ್ಕಾರದಿಂದ ವಜಾಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ನಮ್ಮ ಸಮುದಾಯ ಆಗ್ರಹಿಸಲಿದೆ. ಇದರ ಜಾರಿ ವಿಚಾರವಾಗಿ, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರನ್ನು ಬೋವಿ ಸ್ವಾಮೀಜಿ ಚರ್ಚೆಗೆ ಅಹ್ವಾನಿಸಿದ್ದಾರೆ. ಹೀಗಾಗಿ ಅವರ ಪರವಾಗಿ ಚರ್ಚೆಗೆ ನಾವು ಬರಲು ಸಿದ್ಧರಿದ್ದೇವೆ. ಸರ್ಕಾರದ ಕಾರ್ಯನಿಮಿತ್ತ ಸಚಿವರು, ಬ್ಯುಸಿಯಾಗಿದ್ದಾರೆ. ಹೀಗಾಗಿ ಸದಾಶಿವ ಆಯೋಗದ ವರದಿ ಪರ ಚರ್ಚೆಗೆ ನಮ್ಮನ್ನು ಆಹ್ವಾನಿಸುವಂತೆ ಸಿದ್ದರಾಮೇಶ್ವರ ಸ್ವಾಮೀಜಿಗೆ ಹೇಳಿದ್ದಾರೆ.

ಪದೇ ಪದೇ ಈ ವರದಿ ಜಾರಿಗೆ ಕೆಲವರು ಅಡ್ಡಗಾಲು ಹಾಕುತಿದ್ದು, ವರದಿ ಜಾರಿಯಿಂದಾಗಿ ಪಟ್ಟಿಯಲ್ಲಿರುವ ಯಾವ ಜಾತಿಗೂ ಅನ್ಯಾಯವಾಗುವುದಿಲ್ಲ ಎಂಬ ಭರವಸೆ ಇದೆ. ಆದರೂ ಸಹ ಕೆಲವರು ಸದಾಶಿವ ಆಯೋಗದ ವರದಿ ವಿರೋಧಿಸುತ್ತಿದ್ದು, ಅವರೆಲ್ಲಾ ಅವಿವೇಕಿಗಳು ಎಂದರು.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

ಜೊತೆಗೆ ಪಶುಸಂಗೋಪನ ಸಚಿವ ಪ್ರಭುಚೌಹಾಣ್ ಕೂಡ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿದ್ದಾರೆ. ಈ ವೇಳೆ ನಮ್ಮ ಸಮುದಾಯ ಅವರಿಗೆ ಸವಾಲು ಹಾಕಲಿದೆ. ಚೌಹಾಣ್ ಅವರಿಗೆ ತಾಕತ್ತಿದ್ರೆ ಅವರ ಸರ್ಕಾರದಿಂದ ಸದಾಶಿವ ಆಯೋಗದ ವರದಿಯನ್ನು ವಜಾಗೊಳಿಸುತ್ತೇವೆಂದು ಆದೇಶ ಹೊರಡಿಸಲಿ ನೋಡೋಣ ಎಂದು ಹೇಳಿದರು.ಇದನ್ನೂ ಓದಿ:ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ: ಹಾಲಪ್ಪ ಆಚಾರ್

ಈ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯರಾದ ಜಗದೀಶ್, ರಾಜಣ್ಣ, ಮಹಲಿಂಗಪ್ಪ ಹಾಗೂ ಮಂಜು ಇದ್ದರು.

Source: publictv.in Source link