ಹೊಸ ಗೈಡ್​​ಲೈನ್ಸ್​​; ಮದುವೆಗೆ ಅವಕಾಶ, ಕೆಲವು ಜಿಲ್ಲೆಗಳಲ್ಲಿ ವೀಕೆಂಡ್​​​​ ಕರ್ಫ್ಯೂ ಮತ್ತು ಲಾಕ್ಡೌನ್​​ ಸಡಿಲಿಕೆ -ಆರ್​​. ಅಶೋಕ್​

ಹೊಸ ಗೈಡ್​​ಲೈನ್ಸ್​​; ಮದುವೆಗೆ ಅವಕಾಶ, ಕೆಲವು ಜಿಲ್ಲೆಗಳಲ್ಲಿ ವೀಕೆಂಡ್​​​​ ಕರ್ಫ್ಯೂ ಮತ್ತು ಲಾಕ್ಡೌನ್​​ ಸಡಿಲಿಕೆ -ಆರ್​​. ಅಶೋಕ್​

ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ಸಂಬಂಧ ತಜ್ಞರೊಂದಿಗೆ ಸಭೆ ನಡೆಸಲಾಯ್ತು. ಸಭೆ ಬಳಿಕ ಮಾತಾಡಿದ ಸಚಿವ ಆರ್​​. ಅಶೋಕ್​​, ಕೇರಳದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಹೀಗಾಗಿ ಕೊರೋನಾ ರಾಜ್ಯಕ್ಕೆ ಕೇರಳದಿಂದ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ಸಂಬಂಧ ಸರ್ಕಾರದ ನೀತಿ ನಿಮಯಗಳ ಏನಿರಬೇಕು ಎಂದು ಪ್ರಕಟ ಮಾಡುತ್ತಿದ್ದೇವೆ. ಕೇರಳದಿಂದ ಬರುವ ಎಲ್ಲರು ಒಂದು ವಾರ ಕಡ್ಡಾಯ ಕ್ವಾರಂಟೈನ್ ಆಗಬೇಕು. ಬಳಿಕ ಏಳು ದಿನದ ನಂತರ ಕಡ್ಡಾಯ ಕೋವಿಡ್​​ ಟೆಸ್ಟ್​ ಮಾಡಿಸಬೇಕು ಎಂದು ತಿಳಿಸಿದರು.

ಉಡುಪಿ, ಕೋಲಾರ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ, ಕಲಬುರ್ಗಿ 1.5 ಪಾಸಿಟಿವ್​​ ರೇಟ್​ ಕಡಿಮೆಯಾಗಿದೆ. ಹೀಗಾಗಿ ಇಲ್ಲಿನ ಲಾಕ್ಡೌನ್​​​ ಸಡಿಲಗೊಳಿಸುತ್ತೇವೆ. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆಯೂ ವಾರಾಂತ್ಯ ಕರ್ಫ್ಯೂ ಸಡಿಲ ಮಾಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಸೆ.6 ರಿಂದ 6, 7 ಮತ್ತು 8ನೇ ತರಗತಿ ಶಾಲೆ ಆರಂಭ -ಸಚಿವ ಆರ್.ಅಶೋಕ್​

ಮದುವೆ ಸಮಾರಂಭಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶೇ.50ರಷ್ಟು ಅಂದರೆ 400 ಜನರನ್ನು ಸೇರಿಸಿ ಮದುವೆ ಮಾಡಬಹುದು. ಶೇ. 2 ಪಾಸಿಟಿವ್​ ದರ ಕಡಿಮೆ ಇರುವ ತಾಲೂಕಿನಲ್ಲಿ 6,7,8 ತರಗತಿಗಳನ್ನು ಶುರು ಮಾಡಲಾಗಿದೆ. ಸೆಪ್ಟೆಂಬರ್​​ 6ನೇ ತಾರೀಕಿನಿಂದ ಕೋವಿಡ್​​​ ಮಾರ್ಗ ಸೂಚಿಗಳ ಪಾಲನೆಯೊಂದಿಗೆ ತರಗತಿಗಳು ಆರಂಭಿಸಲು ಅನುಮತಿ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.

Source: newsfirstlive.com Source link