ಸಿಎಂ ಸಭೆ ಬಳಿಕ ಗಣೇಶ ಹಬ್ಬಕ್ಕೆ ಅವಕಾಶ ನೀಡುವ ಕುರಿತು ಆರ್​​. ಅಶೋಕ್​​ ಹೇಳಿದ್ದೇನು?

ಸಿಎಂ ಸಭೆ ಬಳಿಕ ಗಣೇಶ ಹಬ್ಬಕ್ಕೆ ಅವಕಾಶ ನೀಡುವ ಕುರಿತು ಆರ್​​. ಅಶೋಕ್​​ ಹೇಳಿದ್ದೇನು?

ಬೆಂಗಳೂರು: ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ಸಂಬಂಧ ತಜ್ಞರೊಂದಿಗೆ ಸಭೆ ನಡೆಸಲಾಯ್ತು. ಕೊರೋನಾ ಸಭೆ ಬಳಿಕ ಮಾತಾಡಿದ ಸಚಿವ ಆರ್​​. ಅಶೋಕ್​​​, ಗಣೇಶನ ಹಬ್ಬದ ಕುರಿತು 5ನೇ ತಾರೀಕು ಮತ್ತೆ ಸಭೆ ನಡೆಸಲಾಗುವುದು ಎಂದರು.

ಗಣೇಶ್​​​​ ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡುವ ಕುರಿತು ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಸಭೆ ನಡೆಸಲಾಗುವುದು. ಕಳೆದ ಬಾರಿಗಿಂತ ಸ್ವಲ್ಪ ನಿಯಮಗಳ ಸಡಿಲಿಕೆಗೆ ಬೇಡಿಕೆ ಇದೆ. ಮುಖ್ಯಮಂತ್ರಿಗಳು ಒಳ್ಳೆಯ ಸುದ್ದಿ ನೀಡಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಹೊಸ ಗೈಡ್​​ಲೈನ್ಸ್​​; ಮದುವೆಗೆ ಅವಕಾಶ, ಕೆಲವು ಜಿಲ್ಲೆಗಳಲ್ಲಿ ವೀಕೆಂಡ್​​​​ ಕರ್ಫ್ಯೂ ಮತ್ತು ಲಾಕ್ಡೌನ್​​ ಸಡಿಲಿಕೆ -ಆರ್​​. ಅಶೋಕ್​

Source: newsfirstlive.com Source link