ಛೀ ಎಂಥಾ ತಾಯಿ ಈಕೆ? 2 ವರ್ಷದ ಮಗುವಿಗೆ ರಕ್ತ ಬರುವ ಹಾಗೆ ಹೊಡೆದಾಕೆ ಅರೆಸ್ಟ್​

ಛೀ ಎಂಥಾ ತಾಯಿ ಈಕೆ? 2 ವರ್ಷದ ಮಗುವಿಗೆ ರಕ್ತ ಬರುವ ಹಾಗೆ ಹೊಡೆದಾಕೆ ಅರೆಸ್ಟ್​

ಚೆನ್ನೈ: ಪ್ರತಿನಿತ್ಯ ತನ್ನ ಹದಿನೆಂಟು ತಿಂಗಳ ಮಗುವನ್ನು ಥಳಿಸಿ ಹಿಂಸಿಸುತ್ತಿದ್ದ ಆರೋಪದ ಮೇರೆಗೆ ಆಂಧ್ರಪ್ರದೇಶದ ಚಿತ್ತೂರು ಮೂಲದ 22 ವರ್ಷದ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಗಂಡ ವಡಿವಾಜಗನ್ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಡಿವಾಜಗನ್ ಎಂಬಾತ ಐದು ವರ್ಷದ ಹಿಂದೆ ತುಳಸಿ ಎಂಬಾಕೆಯನ್ನು ಮದುವೆಯಾಗಿದ್ದರು. ಈ ದಂಪತಿ ತಮಿಳುನಾಡಿನ ಮೊತ್ತೂರು ಗ್ರಾಮದಲ್ಲಿ ವಾಸವಾಗಿತ್ತು. ಅಲ್ಲದೇ ದಂಪತಿಗೆ ಗೋಕುಲ್ (4) ಮತ್ತು ಪ್ರದೀಪ್ (2) ಎಂಬಿಬ್ಬರು ಮಕ್ಕಳು ಇದ್ದರು. ತುಳಸಿ ಗಂಡ ವಡಿವಾಜಗನ್​​​​ ಜತೆ ನಿತ್ಯ ಜಗಳ ಮಾಡುತ್ತಿದ್ದಳು. ಈ ಜಗಳ ತಾರಕಕ್ಕೇರಿದಾದ ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದಳು. ಗಂಡ ಮೇಲಿನ ಕೋಪದಿಂದ ತುಳಸಿ 18 ತಿಂಗಳ ಪುಟ್ಟ ಮುಗುವನ್ನು ಯಾವಾಗಲು ಹಿಂಸಿಸುತ್ತಿದ್ದಳು.

ಮಗುವಿಗೆ ಕ್ರೂರವಾಗಿ ಹೊಡೆಯುವುದು, ಅದನ್ನು ಫೋನಿನಲ್ಲಿ ವಿಡಿಯೋ ಮಾಡುವ ಕೆಲಸ ಮಾಡುತ್ತಿದ್ದಳು. ಈ ವಿಷಯ ತಿಳಿದ ಕೂಡಲೇ ಸಂಬಂಧಿಕರು ಗಂಡ ವಡಿವಾಜಗನ್​​​ಗೆ ಸುದ್ದಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಖಡಿಸಿ ಪ್ರತಿಭಟನೆ: ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ವಡಿವಾಜಗನ್​​​​​ ಪೊಲೀಸರಿಗೆ ಹೆಂಡತಿ ವಿರುದ್ಧ ದೂರು ನೀಡಿದ್ದಾರೆ. ಕೂಡಲೇ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಇನ್ನು, 18 ತಿಂಗಳು ಮಗುವಿನ ಮೈಮೇಲೆ ಈಕೆ ಬರೆ ಎಳೆದಿದ್ದಾಳೆ. ಹಲವು ಬಾರಿ ಮಗುವಿಗೆ ರಕ್ತ ಬರುವಂತೆ ಹೊಡೆದು ಸಾಯಿಸಲು ಯತ್ನಿಸಿದ್ದಾಳೆ. ತುಳಸಿ ತನ್ನ ಮಗುವನ್ನು ನಿರ್ದಯವಾಗಿ ಥಳಿಸಿದ ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿವೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link