ಗೋವಿಂದಪುರ ಡ್ರಗ್ಸ್​ ಕೇಸ್; ಪೆಡ್ಲರ್​ ಥಾಮಸ್​ ಜೊತೆ ಸಂಪರ್ಕದಲ್ಲಿದ್ದ ಆ 30 ಜನ ಯಾರು?

ಗೋವಿಂದಪುರ ಡ್ರಗ್ಸ್​ ಕೇಸ್; ಪೆಡ್ಲರ್​ ಥಾಮಸ್​ ಜೊತೆ ಸಂಪರ್ಕದಲ್ಲಿದ್ದ ಆ 30 ಜನ ಯಾರು?

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಂದ ದಾಳಿ ನಡೆದಿದ್ದು ಡಿ.ಜೆ. ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೋನಿಯಾ ಅಗರ್ ವಾಲ್ ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಕೇಸ್​ನ ಪ್ರಮುಖ ಆರೋಪಿ ಥಾಮಸ್​ನಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗ್ತಿದೆ.

ಡ್ರಗ್ ಪೆಡ್ಲರ್ ಥಾಮಸ್ 30 ಜನರ ಜೊತೆ ಸಂಪರ್ಕದಲ್ಲಿರುವುದಾಗಿ ಮಾಹಿತಿ ದೊರಕಿದೆ. ಆ 30 ಸಂಪರ್ಕಿತರ ಲಿಸ್ಟ್​ಲ್ಲಿ ಭರತ್, ಸೋನಿಯಾ ಹಾಗೂ ಚಿನ್ನಪ್ಪ ಜೊತೆ ಅತಿ ಹೆಚ್ಚು ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ. ಸದ್ಯ 30 ಜನರು ಯಾರು ಅನ್ನೋದ್ರ ಕುರಿತಾಗಿ ಮಾಹಿತಿ ಸಂಗ್ರಹ ಮಾಡುತ್ತಿರುವ ಪೊಲೀಸರು ಅವರನ್ನು ಕೂಡ ವಿಚಾರಣೆಗೊಳಪಡಿಸೋ ಸಾಧ್ಯತೆಗಳಿವೆ. ಪ್ರಕರಣದ ಇನ್ನುಳಿದ ಆರೋಪಿಗಳಾದ ಭರತ್​, ಸೋನಿಯಾ, ಚಿನ್ನಪ್ಪ ಜೊತೆ ಸೇರಿ ಥಾಮಸ್​ ವೀಕೆಂಟ್ ಪಾರ್ಟಿಯಲ್ಲಿಯೂ ಭಾಗಿಯೋಗಿರೋದು ವಿಚಾರಣೆ ವೇಳೆ ಬಯಲಿಗೆ ಬಂದಿದ್ದು, ಪ್ರತಿಷ್ಠಿತ ಖಾಸಗಿ ಹೋಟೆಲ್ ಗಳಲ್ಲಿ ನಡೆಯುತ್ತಿದ್ದ ವೀಕೆಂಡ್ ಪಾರ್ಟಿಗಳಲ್ಲಿ ಡಿಜೆ ವಚನ್ ಚಿನ್ನಪ್ಪ ಮೂಲಕವೇ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಸದ್ಯ ಮೂವರನ್ನು ವಶಕ್ಕೆ ಪಡೆದಿರೋ ಪೊಲೀಸರು ಡಿಸಿಪಿ ಶರಣಪ್ಪ ತೀವ್ರ ವಿಚಾರಣೆ ನಡೀತಾ ಇದೆ. ಕೇಸ್​ನ ಇನ್ನೋರ್ವ ಆರೋಪಿ ಸೋನಿಯಾ ಅಗರ್ವಾಲ್ ರನ್ನು ಕಳೆದ ಒಂದು ಘಂಟೆಯಿಂದಲೂ ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಸದ್ಯ ಮನೆಯಲ್ಲಿ ಸಿಕ್ಕಿರೋ ಡ್ರಗ್ಸ್ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಪೊಲೀಸ್ರು, ಥಾಮಸ್ ಬಳಿ ಪಡೆದ ಮಾಹಿತಿ ಆಧರಿಸಿ ಸೋನಿಯಾ ಅಗರ್ವಾಲ್ ಗೆ ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಅನ್ನುತ್ತಿರೋ ಸೋನಿಯಾ ಅಗರ್ವಾಲ್ ಆಕೆ ಯಾರ ಜೊತೆ ಸಂಪರ್ಕದಲ್ಲಿದ್ರು, ಅನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗ್ತಿದೆ. ಸದ್ಯ ಆಕೆಯ ಮೊಬೈಲ್ ನಲ್ಲಿರೋ ಚಾಟಿಂಗ್ ಕೂಡ ಚೆಕ್​ ಮಾಡಲಾಗಿದೆ.

ಈಕೆಯಿಂದ ಯಾರ್ಯಾರಿಗೆ ಡ್ರಗ್​ ಸರಬರಾಜಾಗಿದೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗ್ತಿದ್ದು, ಆಕೆಯ ಮೊಬೈಲ್ ನಲ್ಲಿದ್ದ ವಾಟ್ಸಾಪ್ ಗ್ರೂಪ್ ಗಳ ಮೇಲೂ ಪೊಲೀಸ್ರ ಕಣ್ಣಿಟ್ಟಿದ್ದು, ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿರೋ ಹಲವರಿಗೆ ಡವ ಡವ ಶುರುವಾಗಿದೆ. ಸೋನಿಯಾ ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆ ಪೊಲೀಸರು ಸಾಕ್ಷ್ಯಾಧಾರಗಳನ್ನ ಮುಂದಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ರಿಂದ ತನಿಖೆ ನಡೆದಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

Source: newsfirstlive.com Source link