ವಿಕ್ರಾಂತ್​ ರೋಣನ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​​ಗೆ ಸಂಕಷ್ಟ; ED ದಾಳಿಯಲ್ಲಿ ಸಿಕ್ಕಿದ್ದೇನು?

ವಿಕ್ರಾಂತ್​ ರೋಣನ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​​ಗೆ ಸಂಕಷ್ಟ; ED ದಾಳಿಯಲ್ಲಿ ಸಿಕ್ಕಿದ್ದೇನು?

ಬಾಲಿವುಡ್​​ ನಟಿ, ಶ್ರೀಲಂಕನ್​ ಚೆಲುವೆ ಜಾಕ್ವೆಲಿನ್​ ಫರ್ನಾಂಡಿಸ್​ ವಿರುದ್ಧ ಜಾರಿ ನಿರ್ದೇಶಾಲಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಶ್ನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೈಲಿನಲ್ಲಿ ಇದ್ದುಕೊಂಡೆ ಗಣ್ಯ ವ್ಯಕ್ತಿಗಳು, ಉದ್ಯಮಿಗಳಿಂದ ಬಹುಕೋಟಿ ಸುಲಿಗೆ ಪ್ರಕರಣದ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಲಂಚ ಸ್ವೀಕಾರ ಪ್ರಕರಣದಲ್ಲಿ 36 ವರ್ಷದ ಜಾಕ್ವೆಲಿನ್​ ಫರ್ನಾಂಡಿಸ್​ ಸಾಕ್ಷಿಯಾಗಿದ್ದರು ಎಂಬ ಕಾರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲು ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

blank

ಪ್ರಕರಣದಲ್ಲಿ ನಟಿ ಆರೋಪಿಯಲ್ಲ. ಆದರೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಯಾಗಿ ಪ್ರಶ್ನಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಆರೋಪಿ ಚಂದ್ರ ಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 24 ರಂದು ವಿವಿಧ ಕಡೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು, 82.5 ಲಕ್ಷ ರೂಪಾಯಿ ನಗದು ಹಣ, 12ಕ್ಕೂ ಹೆಚ್ಚು ಲಕ್ಸುರಿ ಕಾರುಗಳನ್ನು ಚೆನ್ನೈನ ಕಡಲ ತೀರದಲ್ಲಿರುವ ಬಂಗಲೆ ಇಂದ ವಶಕ್ಕೆ ಪಡೆದುಕೊಂಡಿದ್ದರು.

Source: newsfirstlive.com Source link