ಡ್ರಗ್ಸ್​ ಕೇಸ್; ಸ್ಯಾಂಡಲ್​ವುಡ್​ಗೂ ಇದೆಯಾ ನಂಟು? ವಾಟ್ಸಾಪ್​ನಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

ಡ್ರಗ್ಸ್​ ಕೇಸ್; ಸ್ಯಾಂಡಲ್​ವುಡ್​ಗೂ ಇದೆಯಾ ನಂಟು? ವಾಟ್ಸಾಪ್​ನಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಂದ ದಾಳಿ ನಡೆದಿದ್ದು ಡಿ.ಜೆ. ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೋನಿಯಾ ಅಗರ್ ವಾಲ್ ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ಲ್ಯೂ ಕೊಡ್ತಾ ವಾಟ್ಸಾಪ್​ ಗ್ರೂಪ್​?
ಈ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ತಲ್ಲಣ ಸೃಷ್ಟಿಸಿದ ಮಾದಕ ದ್ರವ್ಯ ಕೇಸ್​ನಲ್ಲಿ ಬಿರುಗಾಳಿ ಉಂಟು ಮಾಡಿದ್ದೆ ಆರೋಪಿಗಳ ವಾಟ್ಸಾಪ್​ ಗ್ರೂಪ್​ಗಳು. ಅದೇ ರೀತಿಯಲ್ಲಿ ಈ ಪ್ರಕರಣದಲ್ಲೂ ವಾಟ್ಸಾಪ್​ ಗ್ರೂಪ್​ಗಳು ಪ್ರಮುಖ ಸಾಕ್ಷ್ಯಾಧಾರಗಳಾಗಿ ಹೊರಹೊಮ್ಮುವ ಸಾಧ್ಯತೆಗಳು ದಟ್ಟವಾಗಿವೆ.

blank

ಇದನ್ನೂ ಓದಿ:  ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಹೌದು ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ನ ಪ್ರಮುಖ ಆರೋಪಿ ಥಾಮಸ್​ನ ಮೊಬೈಲ್​ನಲ್ಲಿ ವಾಟ್ಸಾಪ್​ ಗ್ರೂಪ್​ಗಳ ಮೂಲಕ ಡ್ರಗ್​ ದಂಧೆ ನಡೆದಿದ್ದಾಗಿ ಬೆಳಕಿಗೆ ಬಂದಿದೆ. ಥಾಮಸ್​ ಮೊಬೈಲ್​ನಲ್ಲಿ ‘ಬೆಂಗಳೂರು ಬೆಸ್ಟೀಸ್’ ಎಂಬ ಹೆಸರಿನ ಗ್ರೂಪ್​ನಲ್ಲಿ ಡ್ರಗ್​ ದಂಧೆ ನಡಿತಿತ್ತು ಎನ್ನಲಾಗಿದೆ.

ಆರೋಪಿ ಥಾಮಸ್​ ಮೊಬೈಲ್​ನಲ್ಲಿ ಸ್ಯಾಂಡಲ್​ವುಡ್​ ನಟಿಯರ ಹೆಸರು!
ಈ ಗ್ರೂಪ್ ನಲ್ಲಿ ಥಾಮಸ್ ಸೇರಿ ಹದಿನೈದಕ್ಕೂ ಹೆಚ್ಚು ಮಂದಿ ಇರೋದಾಗಿ ಮಾಹಿತಿ ಲಭ್ಯವಾಗಿದ್ದು, ಗ್ರೂಪಲ್ಲಿರೋ ಹದಿನೈದು ಜನಕ್ಕೂ ಒಂದೊಂದು ಪೆಟ್ ನೇಮ್ ನಲ್ಲಿ ನಂಬರ್ ಸೇವ್ ಮಾಡಲಾಗಿದೆಯಂತೆ. ಅಷ್ಟೇ ಅಲ್ಲದೆ ಚಂದನವನದ ಓರ್ವ ನಟಿಯ ಹೆಸರನ್ನ ಮಿಲ್ಕಿ, ಮತ್ತೊಬ್ಬಳ ಹೆಸರನ್ನು ಬ್ಯೂಟಿ ಅಂತ ಸೇವ್ ಮಾಡಿದ್ದನಂತೆ.

blank

ಥಾಮಸ್ ನನ್ನ ಎಲ್ಲರು ಬ್ರೋ ಎಂದು ಕರೆಯುತ್ತಿದ್ದರಂತೆ. ಇನ್ನು ಥಾಮಸ್ ಮೊಬೈಲ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸೇರಿದ 13 ಮಂದಿ ಹೆಸರುಗಳು ಪತ್ತೆಯಾಗಿದೆ ಎನ್ನಲಾಗ್ತಿದ್ದು, 13 ಜನರ ಹೆಸರು ಮೊಬೈಲ್ ನಂಬರ್ ಸಮೇತ ಪೊಲೀಸರ ಮುಂದೆ ಥಾಮಸ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.ಥಾಮಸ್ ಹೇಳಿಕೆ ಆಧರಿಸಿ ಪೊಲೀಸರು 13 ಜನರ ಸಿಡಿಆರ್, ಟವರ್ ಡಂಪ್ ತೆಗೆದಿದ್ದಾರೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

ಕೇಸ್​ನ ಮೊದಲ ಹಂತದಲ್ಲಿ ಕೇವಲ ಮೂವರ ಮನೆ ಮೇಲೆ ಮಾತ್ರ ದಾಳಿ ಮಾಡಲಾಗಿದ್ದು, ಥಾಮಸ್ ಅರೆಸ್ಟ್ ಆಗ್ತಿದ್ದಂತೆ ಬಹುತೇಕರು ಥಾಮಸ್ ಮೊಬೈಲ್ ಬ್ಲಾಕ್ ಮಾಡಿರೋ ಸಂಶಯ ವ್ಯಕ್ತವಾಗಿದೆ. ಥಾಮಸ್ ಅರೆಸ್ಟ್ ಆಗ್ತಿದ್ದಂತೆ ಉಳಿದವರ ಕಾಲ್ ಸಿಡಿಆರ್ ಹಾಗೂ ಟವರ್ ಡಂಪ್ ಟ್ರೇಸ್ ಮಾಡ್ತಿರೋ ಪೊಲೀಸರು 3 ನಟಿಯರು ಒರ್ವ ರಾಜಕಾರಣಿ ಪುತ್ರ ಇಬ್ಬರು ಈವೆಂಟ್ ಆರ್ಗನೈಸರ್ಸ್, ಒರ್ವ ಸ್ಟಾರ್ ಹೋಟೆಲ್ ಮಾಲೀಕರ ಪುತ್ರ, ಮೂವರು ಉದ್ಯಮಿಗಳ ಪುತ್ರರು ಸೇರಿ 13 ಮಂದಿಗೆ ಡ್ರಗ್ ಪೆಡ್ಲಿಂಗ್ ಮಾಡ್ತಿರೋದಾಗಿ ಥಾಮಸ್ ತಿಳಿಸಿದ್ದಾನೆ ಎನ್ನಲಾಗಿದೆ.

Source: newsfirstlive.com Source link