ಉಡುಪಿ: ಯುವತಿಗೆ ಚಾಕುವಿನಿಂದ ಇರಿದು ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಡುಪಿ: ಯುವತಿಗೆ ಚಾಕುವಿನಿಂದ ಇರಿದು ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಡುಪಿ: ಯುವಕನೊಬ್ಬ ಯುವತಿಗೆ ಚಾಕು ಇರಿದು ನಂತರ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಸಂದೇಶ ಕುಲಾಲ್ ಎಂಬ ಯುವಕ ಸೌಮ್ಯಶ್ರೀ ಎಂಬ ಯುವತಿ ಮೇಲೆ ಹಲ್ಲೆ ಮಾಡಿ ಆತ್ನಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಯುವಕ ಹಾಗೂ ಯುವತಿ ಇಬ್ಬರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯ ಸಂತೆಕಟ್ಟೆ ಸಮೀಪ ಉದ್ಯೋಗಿಯಾಗಿರುವ ಯುವತಿ ಮತ್ತು ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಆದರೆ ಯುವತಿಗೆ ವಾರದ ಹಿಂದೆಯಷ್ಟೇ ನಿಶ್ಚಿತಾರ್ಥ ಆಗಿತ್ತು. ಇದರಿಂದ ಆಕೆಯ ಪ್ರಿಯತಮ ಕುಪಿತಗೊಂಡಿದ್ದ ಎನ್ನಲಾಗಿದೆ.

blank

ಇದೇ ವಿಚಾರವಾಗಿ ಇಬ್ಬರಿಗೂ ಜಗಳ ಆಗಿದೆ ಎನ್ನಲಾಗಿದ್ದು, ಇಂದು ಸಂಜೆ ಬ್ಯಾಂಕಿನಿಂದ ಆಕೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಯುವಕ ಆಕೆಯನ್ನು ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ಜಗಳ ಮಾಡಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಯುವತಿಯೊಂದಿಗೆ ವಾಗ್ವಾದ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆತನ ತನ್ನ ಮೇಲೆ ಹಲ್ಲೆ ಮಾಡ್ತಾನೆ ಎಂದು ಅರಿಯದ ಯುವತಿ ದ್ವಿಚಕ್ರ ವಾಹನದಿಂದ ಸ್ಥಳದಲ್ಲೇ ಉರಿಳಿದು ಬಿದ್ದು ಪ್ರಜ್ಞೆ ತಪ್ಪಿದ್ದು, ಆ ವೇಳೆ ಯುವಕ ಕೂಡ ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಸ್ಥಳೀಯರು ಘಟನೆಯನ್ನು ತಪ್ಪಿಸಲು ಯತ್ನಿಸಿದ್ದು, ಅಷ್ಟರಲ್ಲೇ ಇಬ್ಬರೂ ಕುಸಿದು ಬಿದ್ದಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Source: newsfirstlive.com Source link