ಸುರಂಜನ್ ದಾಸ್ ರಸ್ತೆ ಅಂಡರ್ ಪಾಸ್; ಮರ ಕಡಿಯಲು ಷರತ್ತುಬದ್ಧ ಅನುಮತಿ ನೀಡಿದ‌ ಹೈಕೋರ್ಟ್

ಸುರಂಜನ್ ದಾಸ್ ರಸ್ತೆ ಅಂಡರ್ ಪಾಸ್; ಮರ ಕಡಿಯಲು ಷರತ್ತುಬದ್ಧ ಅನುಮತಿ ನೀಡಿದ‌ ಹೈಕೋರ್ಟ್

ಬೆಂಗಳೂರು: ನಗರದ ಸುರಂಜನ್ ದಾಸ್ ರಸ್ತೆಗೆ ಅಂಡರ್ ಪಾಸ್ ನಿರ್ಮಿಸುವ ಯೋಜನೆಗೆ ಮರಗಳನ್ನು ಕಡಿಯಲು ಹೈಕೋರ್ಟ್​ ಷರತ್ತುಬದ್ಧ ಅನುಮತಿ ನೀಡಿದೆ.

ಹೆಚ್​ಎಎಲ್ ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್ ಭಾಗವಾಗಿ ಅಂಡರ್ ಪಾಸ್ ನಿರ್ಮಿಸಲು ಈ ಹಿಂದೆ 10 ಮರ ಕಡಿಯಲು ಬಿಬಿಎಂಪಿ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸ್ವಾತಿ ದಾಮೋದರ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ವಿಭಾಗೀಯ ಪೀಠ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ, ಟ್ರಾಫಿಕ್ ನಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಅಂಡರ್ ಪಾಸ್ ನಿರ್ಮಾಣ ಅಗತ್ಯವಿದೆ. ಹಾಗಾಗಿ ಮರ ಕಡಿಯುವುದಕ್ಕೆ ಪ್ರತಿಯಾಗಿ ಮರ ಬೆಳೆಸಲು ಸೂಚನೆ ನೀಡಿ ಮರ ಕಡಿಯುವುದಕ್ಕೆ ಪರಿಹಾರವಾಗಿ ಹೆಚ್ಚು ಮರ ಬೆಳೆಸಲು ನಿರ್ದೇಶನ ನೀಡಿ ತೀರ್ಪು ನೀಡಿದೆ.

ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ನಟ, ನಿರ್ದೇಶಕ ರಿಷಬ್ ಶೆಟ್ಟಿ..

Source: newsfirstlive.com Source link