ಬೆಂಗಳೂರಿನಲ್ಲಿ ಪೊಲೀಸ್​​ ಹೆಡ್​ ಕಾನ್ಸ್​ಟೇಬಲ್​​ ಆತ್ಮಹತ್ಯೆ

ಬೆಂಗಳೂರಿನಲ್ಲಿ ಪೊಲೀಸ್​​ ಹೆಡ್​ ಕಾನ್ಸ್​ಟೇಬಲ್​​ ಆತ್ಮಹತ್ಯೆ

ಬೆಂಗಳೂರು: ಪೊಲೀಸ್​​ ಹೆಡ್​ ಕಾನ್ಸ್​​ಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಿರಿನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದಾಶಿವ (42) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​​ ಹೆಡ್​​ ಕಾನ್ಸ್​​ಟೇಬಲ್​​​​.

ಸೈಬರ್ ಕ್ರೈಂ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಸದಾಶಿವ ಮನೆಗೆ ಆಗಮಿಸಿದರು. ಯಾರು ಇಲ್ಲದ ಸಂದರ್ಭ ನೋಡಿಕೊಂಡು ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಇನ್ನು, ಕುಟುಂಬಸ್ಥರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡರೋ ಗೊತ್ತಿಲ್ಲ ಎಂದು ಮೃತ ಸದಾಶಿವ ಕುಟುಂಬಸ್ಥರು ಹೇಳಿದ್ದಾರೆ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್; ಸ್ಯಾಂಡಲ್​ವುಡ್​ಗೂ ಇದೆಯಾ ನಂಟು? ವಾಟ್ಸಾಪ್​ನಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

Source: newsfirstlive.com Source link