‘ನಾಗ್​ ಮಾಮ’ ಬರ್ತ್​​ಡೇ ಪಾರ್ಟಿಗೆ ಸ್ಯಾಮ್​ ಗೈರು.. ಅಕ್ಕಿನೇನಿ ಕುಟುಂಬದಿಂದ ದೂರವಾದ್ರಾ ಸಮಂತಾ?

‘ನಾಗ್​ ಮಾಮ’ ಬರ್ತ್​​ಡೇ ಪಾರ್ಟಿಗೆ ಸ್ಯಾಮ್​ ಗೈರು.. ಅಕ್ಕಿನೇನಿ ಕುಟುಂಬದಿಂದ ದೂರವಾದ್ರಾ ಸಮಂತಾ?

ನಿನ್ನೆಯಷ್ಟೇ ಟಾಲಿವುಡ್​ ಕಿಂಗ್​ ಅಕ್ಕಿನೇನಿ ನಾಗಾರ್ಜುನ ತಮ್ಮ 62 ವಸಂತಕ್ಕೆ ಕಾಲಿಟಿದ್ದಾರೆ. ಇನ್ನು ನಾಗಾರ್ಜುನ ತನ್ನ ಕುಟುಂಬದ ಜೊತೆ ತಮ್ಮ ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದ್ರೆ ನಾಗಾರ್ಜುನ ಬರ್ತ್​ಡೇ ಸೆಲೆಬ್ರೇಶನ್​ನಲ್ಲಿ ಅಕ್ಕಿನೇನಿ ಕುಟುಂಬದ ಓರ್ವ ಸದಸ್ಯೆ ಮಿಸ್​ ಆಗಿದ್ದಾರೆ.

blank

ಹೌದು, ನಟಿ ಸಮಂತಾ ಅಕ್ಕಿನೇನಿ ನಾಗಾರ್ಜುನ ಬರ್ತ್​ಡೇ ಸೆಲೆಬ್ರೇಶನ್​ನಲ್ಲಿ ಭಾಗಿಯಾಗಿಲ್ಲ. ಇನ್ನು ನಾಗಾರ್ಜುನ ಬರ್ತ್​ಡೇ ಸೆಲೆಬ್ರೇಶನ್​ ಫೋಟೋ​ಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಈ ಫೋಟೋಸ್​ಗಳಲ್ಲಿ ಸಮಂತಾ ಅಕ್ಕಿನೇನಿ ಎಲ್ಲಿಯೂ ಕಾಣಿಸ್ತಿಲ್ಲ. ಇನ್ನು ಸ್ಯಾಮ್​ ತನ್ನ ಪ್ರೀತಿಯ ಮಾವನ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸಿದ್ರು. ಅದ್ರೆ ನಾಗಾರ್ಜುನ್​ ಸಮಂತಾರನ್ನ ಬಿಟ್ಟು ಬೇರೆ ಯಾರೆಲ್ಲ ಅವರಿಗೆ ವಿಶ್​ ಮಾಡಿದ್ರೊ ಅವರೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

blank

ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್​ನ ಕೆಲ ಸಿನ್​ಗಳ ಅಕ್ಕಿನೇನಿ ಫ್ಯಾಮಿಲಿಗೆ ಮುಜುಗರ ಉಂಟು ಮಾಡಿದ ಕಾರಣ ಸ್ಯಾಮ್​ ಮತ್ತು ನಾಗ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ. ಹೀಗಾಗಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ಗೂ ಕೂಡ ಅಪ್ಲೈ ಮಾಡಿದ್ದಾರೆ ಅಂತಾ ಸದ್ಯ ಟಾಲಿವುಡ್​ ಅಂಗಳದಲ್ಲಿ ಕೆಲ ಮಾತುಗಳು ಕೇಳಿ ಬರುತ್ತಿದೆ.

Source: newsfirstlive.com Source link