ಡ್ರಗ್ಸ್​ ಕೇಸ್; ಮಾಡೆಲ್​​​ ಸೋನಿಯಾ ಅಗರ್ವಾಲ್​​ ಅರೆಸ್ಟ್​

ಡ್ರಗ್ಸ್​ ಕೇಸ್; ಮಾಡೆಲ್​​​ ಸೋನಿಯಾ ಅಗರ್ವಾಲ್​​ ಅರೆಸ್ಟ್​

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಆರೋಪಿ ಮಾಡೆಲ್​​ ಸೋನಿಯಾ ಅಗರ್ವಾಲ್ ಬಂಧನ ಮಾಡಲಾಗಿದೆ. ಪ್ರಕರಣ ಸಂಬಂಧ ಸೋನಿಯಾ ಅಗರ್ವಾಲ್​​ರನ್ನು ಗೋವಿಂದಪುರ ಠಾಣೆ ಪೊಲೀರು ಬಂಧಿಸಿದ್ದಾರೆ.

ಸೋನಿಯಾ ಅಗರ್ವಾಲ್ ಜತೆ ಪಾರ್ಟಿಯಲ್ಲಿ ಜೊತೆಯಾದವರಿಗೂ ಮೆಡಿಕಲ್ ಟೆಸ್ಟ್​​ಗೆ ಗೋವಿಂದಪುರ ಪೊಲೀಸರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಕೂಡಲೇ ನೋಟಿಸ್​​ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗಾಗಲೇ ಸೋನಿಯಾ ಅಗರ್ವಾಲ್ ಸ್ನೇಹಿತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಜೊತೆ ನಿರಂತರ ಟಚ್​​ನಲ್ಲಿದ್ದ ಎಲ್ಲರಿಗೂ ನೋಟಿಸ್​ ನೀಡಲಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸೋನಿಯಾ ಅಗರ್ವಾಲ್​​ ಕೆಲವು ಸ್ನೇಹಿತರು ಮೊಬೈಲ್​​ ಸ್ವಿಚ್​ ಆಫ್​​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್; ಸ್ಯಾಂಡಲ್​ವುಡ್​ಗೂ ಇದೆಯಾ ನಂಟು? ವಾಟ್ಸಾಪ್​ನಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

Source: newsfirstlive.com Source link