ಡೇಂಜರ್..ಡೇಂಜರ್​.. ಜಿಮ್​​ನಲ್ಲಿ ವರ್ಕೌಟ್​​ ಮಾಡುತ್ತಲೇ ಸಾವನ್ನಪ್ಪಿದ ಯುವಕ

ಡೇಂಜರ್..ಡೇಂಜರ್​.. ಜಿಮ್​​ನಲ್ಲಿ ವರ್ಕೌಟ್​​ ಮಾಡುತ್ತಲೇ ಸಾವನ್ನಪ್ಪಿದ ಯುವಕ

ಬೆಂಗಳೂರು: ವರ್ಕೌಟ್ ಮಾಡುವ ವೇಳೆ ಯುವಕನೋರ್ವ ಹೃದಯಾಘಾತಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನಶಂಕರಿಯ ಗೋಲ್ಡ್ ಜಿಮ್​​ನಲ್ಲಿ ನೋಡ ನೋಡುತ್ತಿದ್ದಂತೆ ಕೆಳಗೆ ಬಿದ್ದ ಯುವಕ ಒದ್ದಾಡಿದ್ದೇನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಮನಕಲುಕುವಂತಿದೆ.

ವರ್ಕೌಟ್ ವೇಳೆ ಯುವಕನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ಪಕ್ಕದಲ್ಲೇ ಇದ್ದ ಮೆಟ್ಟಿಲ ಮೇಲೆ ಯುವಕ ಸ್ವಲ್ಪ ಹೊತ್ತು ಕುಳಿತಿದ್ದ. ನೀರು ಕುಡಿದ ಸ್ವಲ್ಪ ಹೊತ್ತಿನಲ್ಲೇ ಯುವಕ ಕುಸಿದು ಬಿದ್ದಿದ್ದಾನೆ. ಸದ್ಯ ಪೊಲೀಸರು ವಿಡಿಯೋ ನೋಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸದ್ಯ ಬನಶಂಕರಿ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಡಿಯೋ ಪರಿಶೀಲನೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸ್​​ ಹೆಡ್​ ಕಾನ್ಸ್​ಟೇಬಲ್​​ ಆತ್ಮಹತ್ಯೆ

Source: newsfirstlive.com Source link