‘ಏನೇ ಆಗ್ಲಿ ನಾವು ಬಂದೇ ಬರ್ತಿವಿ’.. ಅಭಿಮಾನಿಗಳಿಗೆ ಕೈ ಮುಗಿದು ಶಿವರಾಜ್​​ಕುಮಾರ್ ಕ್ಷಮೆ ಕೇಳಿದ್ಯಾಕೆ?

‘ಏನೇ ಆಗ್ಲಿ ನಾವು ಬಂದೇ ಬರ್ತಿವಿ’.. ಅಭಿಮಾನಿಗಳಿಗೆ ಕೈ ಮುಗಿದು ಶಿವರಾಜ್​​ಕುಮಾರ್ ಕ್ಷಮೆ ಕೇಳಿದ್ಯಾಕೆ?

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ತನ್ನನ ಆರಾಧಿಸೋ ಅಭಿಮಾನಿ ದೇವರುಗಳಿಗೆ ಕ್ಷಮೆ ಕೇಳಿದ್ದಾರೆ. ನೀವು ನನಗೆ ಮುಖ್ಯ ಎಂದಿದ್ದಾರೆ.

ತನ್ನನ ಆರಾಧಿಸಿ ಅಭಿಮಾನಿಸೋ ಅಭಿಮಾನಿಗಳನ್ನ ದೇವರೆಂದ್ರು ವರನಟ ಡಾ.ರಾಜ್ ಕುಮಾರ್. ಅವರಂತೆ ಅವರ ಮಕ್ಕಳು ಕೂಡ ಅಭಿಮಾನಿಗಳನ್ನ ದೇವರಂತೆ ಕಂಡು ಬಾಳುತ್ತಿದ್ದಾರೆ. ಇಂತಿಪ್ಪ ದೊಡ್ಮನೆಯ ಒನ್​ ಆಂಡ್ ಓನ್ಲಿ ಕೋಹಿನೂರ್‌ ಡೈಮೆಂಡ್ ಡಾ.ಶಿವರಾಜ್ ಕುಮಾರ್ ತನ್ನ ಅಭಿಮಾನಿ ದೇವರುಗಳನ್ನ ಕೈ ಮುಗಿದು ಕ್ಷಮೆ ಕೇಳಿದ್ದಾರೆ.

blank

ಅದೇ ಏನೇ ಆಗ್ಲಿ ನಾವು ಬಂದೇ ಬರ್ತಿವಿ, ನಿಮ್ಮನ ರಂಜನೆಯ ಕಡಲಲ್ಲಿ ತೇಲಾಡುವಂತೆ ಮಾಡೇ ಮಾಡ್ತಿವಿ ಎಂದಿದ್ದ ಭಜರಂಗಿ-2 ಸಿನಿಮಾ ತಂಡ.. ಆದ್ರೆ ಪರಿಸ್ಥಿತಿ ಯಾರು ಅಂದುಕೊಂಡಂಗೆ ಕೂಡಿ ಬರುತ್ತಿಲ್ಲ.. ಜನ ಮುಖ್ಯ , ಜನರಲ್ಲಿರೋ ಅಭಿಮಾನ ಮುಖ್ಯ , ಅಭಿಮಾನಿ ದೇವರಗಳ ಆರೋಗ್ಯ ಮುಖ್ಯ ,ತಂತ್ರಜ್ಞರ ಶ್ರಮ ಮುಖ್ಯ , ನಿರ್ಮಾಪಕನ ಲಾಭವೂ ಮುಖ್ಯ , .. ಈ ಕಾರಣಕ್ಕೆ ಭಜರಂಗಿ-2 ಸಿನಿಮಾ ಸೆಪ್ಟೆಂಬರ್ 10 ಗಣಪತಿ ಹಬ್ಬದ ಪ್ರಯುಕ್ತ ತೆರೆಕಾಣುತ್ತಿಲ್ಲ.

ಇನೇನು ಕಾಣದ ಕೊರೊನಾ ಕಾಟ ಮುಗಿತ್ತು ಅನ್ನೋಷ್ಟರಲ್ಲಿ ಎರಡನೇ ಅಲೆ ಬಂದು ವಕ್ರಸಿತ್ತು. ಎಲ್ಲಾ ರಂಗಕ್ಕಿಂತ ಚಿತ್ರರಂಗ ಕೊರೊನಾ ಕಾಟಕ್ಕೆ ಹೆಚ್ಚೇ ತತ್ತರಿಸಿ ಹೋಗಿದೆ. ಎರಡನೇ ಅಲೆ ಮುಗಿತ್ತು ಇನ್ನ್ ಹಿಂದಿನಂತೆ ಕಲರ್​ಫುಲ್ ಜಾತ್ರೆ ಮಾಡಬಹುದು ಅನ್ನೋಷ್ಟರಲ್ಲಿ ಮೂರನೇ ಅಲೆಯ ಭೀತಿ ಶುರುವಾಗಿದೆ. ಮೂರನೇ ಅಲೆಯ ಕಾರಣದಿಂದಾಗಿಯೇ ಮುಂಜಾಗ್ರತವಾಗಿ ವೀಕೆಂಡ್ ಕರ್ಪ್ಯೂ, 9 ಗಂಟೆಗೆ ಎಲ್ಲಾ ಕ್ಲೋಸ್ ಇತ್ಯಾದಿ ಇತ್ಯಾದಿ ನಿಬಂಧನೆಗಳಿವೆ. ಈ ಸಂದರ್ಭದಲ್ಲಿ ಥಿಯೇಟರ್​ಗೆ ಬರೋದು ಸರಿ ಅಲ್ಲ ಎಂದು ಭಜರಂಗಿ-2 ಫಿಲ್ಮ್ ಟೀಮ್ ರಿಲೀಸ್ ಡೇಟ್ ಅನ್ನ ಮುಂದೂಡಿದೆ. ಈ ವಿಚಾರವನ್ನ ಭಜರಂಗಿ ಚಿತ್ರತಂಡದ ಜೊತೆ ಶಿವಣ್ಣ ಅವರೇ ಮಾಹಿತಿ ಕೊಟ್ಟಿದ್ದಾರೆ.

blank

ಜಯಣ್ಣ ಭೋಗಣ್ಣ ನಿರ್ಮಾಣದ ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಟ್ರೈಲರ್ ಸದ್ಯಕ್ಕಂತೂ ಜನರ ಮುಂದೆ ಪ್ರತ್ಯಕ್ಷವಾಗಲ್ಲ.. ರಿಲೀಸ್ ಡೇಟ್ ಕನ್ಫರ್ಮ್ ಆದ ನಂತರ ಟ್ರೈಲರ್; ಆ ಟ್ರೈಲರ್​​ನಲ್ಲೇ ಸಿನಿಮಾದ ರಿಲೀಸ್ ಡೇಟ್ ಅನ್ನ ಅನೌನ್ಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.. ಒಟ್ಟಿನಲ್ಲಿ ಚಿತ್ರರಂಗಕ್ಕೆ ಇದು ನಿಜಕ್ಕೂ ಕಷ್ಟದ ಸಮಯ.

 

Source: newsfirstlive.com Source link